SUDDILIVE || SHIVAMOGGA
ಉದ್ಘಾಟನೆಗೊಂಡು ಒಂದೇ ತಿಂಗಳಲ್ಲಿ ಬಿರುಕುಗೊಂಡ ಹೈವೆ ರಸ್ತೆ-Highway cracked within a month of opening
ಎಂಪಿ ಬಿವೈ ರಾಘವೇಂದ್ರ ಕೈಯಲ್ಲಿ ಉದ್ಘಾಟನೆಗೊಂಡ ರಸ್ತೆ ಕೆಲವೇ ದಿನಗಳಲ್ಲಿ ಕುಸಿತ ಕಂಡಿದೆ. ಒಂದೇ ತಿಂಗಳಲ್ಲಿ ರಸ್ತೆ ಬಿರುಕು ಕಂಡಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ ಹೊಳೆಹೊನ್ನೂರಿನಲ್ಲಿ ಸೊಲ್ಲಾಪುರ ಮತ್ತು ಮಂಗಳೂರಿನ ಹೈವೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಂದೇ ಮಳೆಗೆ ಬೈಪಾಸ್ ರಸ್ತೆ ಬಿರುಕು ಬಿಟ್ಟುಕೊಂಡಿದೆ.
ಕಳೆದ ಒಂದು ವರ್ಷಗಳಿಂದ ಹಿಂದೆ ಅಷ್ಟೆ ಕಾಮಗಾರಿ ಮುಗಿದಿತ್ತು. ಸಂಪೂರ್ಣ ಕುಸಿಯುವ ಹಂತಕ್ಕೆ ರಸ್ತೆ ತಲುಪಿದೆ. ಸೇತುವೆ ಪಕ್ಕದಲ್ಲಿ ಸಂಪೂರ್ಣ ರಸ್ತೆ ಕುಸಿಯುವ ಆತಂಕ ಹೆಚ್ಚಾಗಿದೆ.
Highway cracked