ಎಲ್ಲೆಂದರಲ್ಲಿ ರೇಡಿಯೋ ಕಾಲರ್ ಕಾಡಾನೆ ಪ್ರತ್ಯಕ್ಷ-Radio collared wild elephants are visible everywhere

SUDDILIVE || SHIVAMOGGA

ಎಲ್ಲೆಂದರಲ್ಲಿ ರೇಡಿಯೋ ಕಾಲರ್ ಕಾಡಾನೆ ಪ್ರತ್ಯಕ್ಷ-Radio collared wild elephants are visible everywhere.

Radio collared, elephant

ದಾರಿತಪ್ಪಿದ್ದ ಕಾಡಾನೆ - ಮಲೆನಾಡಿನಲ್ಲಿ ಊರು ಊರು ಸುತ್ತುತ್ತಿದೆ. ನಿನ್ನೆ ತೀರ್ಥಹಳ್ಳಿ ತಾಲೂಕು ಸುತ್ತಾಡಿದ ಆನೆ ಇಂದು ಹೊಸನಗರ ಭಾಗದಲ್ಲಿ ಪ್ರತ್ಯಕ್ಷವಾಗಿದೆ. ಕಾಡಾನೆ ಕಂಡು  ಮಲೆನಾಡಿಗರು ಭಯಭಭೀತಗೊಂಡಿದ್ದಾರೆ. 

ಭದ್ರ ಅರಣ್ಯ ಭಾಗ ಅಥವಾ ಮಂಡ್ಯಕಡೆಯಿಂದ ದಾರಿ ತಪ್ಪಿ ಈ ಭಾಗಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಕಾಡಾನೆ ಕುತ್ತಿಗೆ ಭಾಗದಲ್ಲಿ ಕಾಲರ್ ಡಿವೈಜ್ ಅಳವಡಿಸಲಾಗಿದೆ.ಕಾಲರ್ ಡಿವೈಜ್ ಅನ್ನು ಹೊತ್ತು ತಿರುಗಿತ್ತಿದೆ. ಶಿವಮೊಗ್ಗದ ಹೊಸನಗರ (ತಾ)ನ ಯಡೂರು ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. 


ಆನೆ ಕಂಡು ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ. ತೀರ್ಥಹಳ್ಳಿ ಆರಗ, ಗುಡ್ಡೆಕೊಪ್ಪ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಆನೆ ಈಗ ಯಡೂರು ಗ್ರಾಮದಲ್ಲಿ ಪ್ರತ್ಯಕ್ಷವಾಗಿದೆ. ಮಳೆ ಗಾಳಿ ಆರ್ಭಟಕ್ಕೆ ಹಾಗೂ ಆಹಾರ ಅರಸಿ ಸೀದಾ ಮನೆ ಅಂಗಳಕ್ಕೆ ಕಾಡಾನೆ ಬಂದಿದೆ. ರಾತ್ರಿ ವೇಳೆ ಅಂಗಡಿ ಮುಂಗಟ್ಟಿನಲ್ಲಿ ಪ್ರತ್ಯಕ್ಷವಾಗಿದೆ. 

ಆನೆ ಸಂಚಾರದಿಂದ.. ಮನೆಯಿಂದ ಆಚೆ ಬರಲು ಗ್ರಾಮಸ್ಥರು ಭಯ ಪಡುತ್ತಿದ್ದಾರೆ. ಸಾರ್ವಜನಿಕರು ಎಚ್ಚರಿಕೆ ಯಿಂದ ಇರುವಂತೆ ನಗರ ಅರಣ್ಯ ಇಲಾಖೆ ಈಗಾಗಲೇ ಮನವಿ ಮಾಡಿಕೊಂಡಿದೆ. ಸ್ಥಳೀಯ ಸಿಸಿ ಕ್ಯಾಮೆರಲ್ಲಿ ಆನೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಕೇವಲ ಒಂದೇ ದಿನದಲ್ಲಿ ಐವತ್ತಕ್ಕೂ ಹೆಚ್ಚು ಕಿಮೀ ದೂರ ಕ್ರಮಿಸಿದೆ. 

Radio collared wild elephants are visible everywhere.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close