SUDDILIVE || SHIVAMOGGA
ಕೊಲೆ ಮಾಡಿದ್ದ 8 ಜನರಿಗೆ ಅಜೀವ ಸೆರೆವಾಸ ಶಿಕ್ಷೆ-8 people sentenced to life imprisonment for murder
ಭದ್ರಾವತಿಯಲ್ಲಿ ಹಣಕ್ಕೆ ಜಗಳವಾಡಿಕೊಂಡು ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆಗೈದ 8 ಜನ ಆರೋಪಿಗಳಿಗೆ ಅಜೀವ ಸೆರೆವಾಸ ಶಿಕ್ಷೆಯನ್ನ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಭದ್ರಾವತಿ ಹನುಮಂತನಗರದ ವಾಸಿ, 26 ವರ್ಷದ ಶಾರುಖ್ ಖಾನ್ ಹಾಗೂ ಅದೇ ಏರಿಯಾದ ವಾಸಿಯಾದ ಹಂದಿ ರಮೇಶ ಮತ್ತಿತರರಿಗೂ ಹಣದ ವಿಚಾರವಾಗಿ ಗಲಾಟೆಯಾಗಿದೆ. 2020 ನೇ ಇಸವಿ ಸೆ.30 ರಂದು ರಾತ್ರಿ ರಮೇಶ @ ಹಂದಿ ರಮೇಶ ಹಾಗೂ ಆತನ ಕಡೆಯವರು ಶಾರೂಖ್ ನ ಮನೆಯ ಬಳಿ ಬಂದು ಶಾರೂಕ್ ಅನ್ನು ಬಿಡುವುದಿಲ್ಲ ಸಾಯಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿದ್ದರು.
ನಂತರ ಹಂದಿ ರಮೇಶ ಮತ್ತು ಆತನ ಸಹಚರರು ಸೇರಿ ಹಳೆಯ ವೈಷಮ್ಯದಿಂದ ಶಾರೂಖ್ ನನ್ನು ಕೊಲೆ ಮಾಡಿದ್ದು ಅವರ ವಿರುದ್ಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ರಾಘವೇಂದ್ರ ಕಾಂಡಿಕೆ ಸಿಪಿಐ ಭದ್ರಾವತಿ ನಗರ ವೃತ್ತ ರವರು ತನಿಖೆ ಕೈಗೊಂಡು ಆರೋಪಿತರಾದ 1.ರಮೇಶ @ ಹಂದಿ ರಮೇಶ 44 ವರ್ಷ, ಹೊಸಮನೆ ಭದ್ರಾವತಿ, 2.ವೆಂಕಟರಾಮ 35 ವರ್ಷ ಹನುಮಂತನಗರ ಭದ್ರಾವತಿ, 3. ಚಂದ್ರ 37 ವರ್ಷ, ಹನುಮಂತನಗರ ಭದ್ರಾವತಿ, 4. ಕಾರ್ತಿಕ 24 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 5. ಮಧುಸೂದನ್ 28 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 6. ರಮೇಶ 37 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, 7. ನಾಗರಾಜ 25 ವರ್ಷ, ಹೊಸಮನೆ ಭದ್ರಾವತಿ, 8. ಸಿದ್ದಪ್ಪ 48 ವರ್ಷ ಸತ್ಯ ಸಾಯಿ ನಗರ ಭದ್ರಾವತಿ,ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರಾಗಿ ಪ್ರಕರಣದ ವಾದ ಮಂಡಿಸಿದ್ದರು. ವಿಚಾರಣೆ ಆಲಿಸಿದ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದೆ.
ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಸೆ.29 ರಂದು ಎಲ್ಲಾ 08 ಜನ ಆರೋಪಿಗಳಿಗೆ ಅಜೀವ ಸೆರೆವಾಸ ವಿಧಿಸಿ ಆದೇಶಿಸಿದ್ದಾರೆ.
8 people sentenced to life imprisonment for murder
