SUDDILIVE || SHIVAMOGGA
ಯುವತಿಯನ್ನ ಅಡ್ಡಕಟ್ಟಿ ಅತ್ಯಾಚಾರಕ್ಕೆ ಯತ್ನ-Attempted rape by tying up a young woman
ತಾಯಿ ಮತ್ತು ಸಹೋದರನನ್ನು ಬಸ್ಸಿಗೆ ಹತ್ತಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಶಿವಮೊಗ್ಗ ಸರ್ಕಿಟ್ ಹೌಸ್ ಬಳಿ ಶರಾವತಿ ನಗರ ಎ ಬ್ಲಾಕ್‌ನಲ್ಲಿ ಸೆ.8ರ ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ.
ಶಿವಮೊಗ್ಗ ನಗರದ ಯುವತಿಯೊಬ್ಬರು, ತನ್ನ ತಾಯಿ ಮತ್ತು ಸಹೋದರನನ್ನು ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಿಟ್ಟು ಮರಳುತ್ತಿದ್ದರು. ಬಸ್ ನಿಲ್ದಾಣದ ಬಳಿ ಇಬ್ಬರು ಯುವಕರು ನಿಂತಿದ್ದರು. ಅವರನ್ನು ಗಮನಿಸಿದ್ದ ಯುವತಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಯತ್ತ ತೆರಳುತ್ತಿದ್ದರು. ಆ ಪೈಕಿ ಒಬ್ಬ ಯುವಕ ಯುವತಿಯ ದ್ವಿಚಕ್ರ ವಾಹವನ್ನು ಹಿಂಬಾಲಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅತ್ಯಾಚಾರದ ಯತ್ನದ ಆರೋಪ
ಸರ್ಕಿಟ್ ಹೌಸ್ ಸಮೀಪ ಯುವತಿಯ ದ್ವಿಚಕ್ರ ವಾಹನಕ್ಕೆ ಆ ಯುವಕ ತನ್ನ ಬೈಕ್ ಅಡ್ಡಿಗಟ್ಟಿ ಬೀಳಿಸಿದ್ದಾನೆ. ಯುವತಿಯ ವೇಲ್ ಮತ್ತು ಟೀ ಶರ್ಟ್ ಹಿಡಿದು ಎಳೆದಾಡಿದ್ದಾನೆ. ಈ ವೇಳೆ ಯುವತಿಯ ಟೀ ಶರ್ಟ್ ಹರಿದಿದ್ದು, ಆಕೆ ತಪ್ಪಿಸಿಕೊಂಡಿ ಓಡಿದ್ದಾರೆ. ಅದೇ ಮಾರ್ಗದಲ್ಲಿ ವಾಹನ ಬಂದಿದ್ದರಿಂದ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Attempted rape by tying up a young woman
