ಪಾಕಿಸ್ತಾನ್ ಜಿಂದಾಬಾದ್ ಎಂದವರ ಪರ ವಕಾಲತ್ತು ವಹಿಸದಂತೆ ಬಾರ್ ಅಸೋಸಿಯೇಷನ್ ನಿರ್ಧಾರ

 SUDDILIVE || BHADRAVATHI

ಪಾಕಿಸ್ತಾನ್ ಜಿಂದಾಬಾದ್ ಎಂದವರ ಪರ ವಕಾಲತ್ತು ವಹಿಸದಂತೆ ಬಾರ್ ಅಸೋಸಿಯೇಷನ್ ನಿರ್ಧಾರ-Bar Association decides not to advocate for those who say Pakistan Zindabad

ಭದ್ರಾವತಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಪರ ವಕಾಲತ್ತು ವಹಿಸದಂತೆ ಬಾರ್ ಅಸೋಸಿಯೇಷನ್ ತೀರ್ಮಾನಿಸಿದೆ. 

ಈ ಕುರಿತು ಭದ್ರಾವತಿ  ಬಾರ್ ಅಸೋಸಿಯೇಷನ್ ನ ಅಧ್ಯಕ್ಷ ಉಮೇಶ್ ಇಂದು ಸುತ್ತೋಲೆ ಹೊರಡಿಸಿದ್ದು, ಭದ್ರಾವತಿಯಲ್ಲಿ ಗಾಂಧಿ ವೃತ್ತದಲ್ಲಿ ಸೆ.8 ರಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಯನ್ನ ಕೂಗಲಾಗಿತ್ತು. 

ಈ ಘೋಷಣೆ ಕೂಗಿದವರ ವಿರುದ್ಧ ಪೊಲೀಸ್ ಇಲಾಖೆ ದೂರು ದಾಖಲಿಸುವುದಾಗಿ ಹೇಳಿದೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಅವರ ಪರವಾಗಿ ವಕಾಲತ್ತನ್ನ ಯಾರೂ ವಹಿಸದಂತೆ ಉಮೇಶ್ ಸುತ್ತೋಲೆ ಹೊರಡಿಸಿದ್ದಾರೆ. 

ಇದರಿಂದಾಗಿ ಪ್ರಕರಣ ಮತ್ತೊಂದು ಆಯಾಮವನ್ನ ಪಡೆದುಕೊಂಡಿದ್ದು, ಕುತೂಹಲ ಹಂತಕ್ಕೆ ಮೂಡಿದೆ. 

Bar Association decides not to advocate for those who say Pakistan Zindabad

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close