SUDDILIVE || SHIVAMOGGA
ಮ್ಯೂಸಿಕಲ್ ನೈಟ್ಸ್ ನಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಸರಿ ಮಾಡಿ-ಕರವೇ ಸಿಂಹ ಸೇನೆ ಮನವಿ-Karave Simha Sena appeals to improve seating arrangements for the public at musical nights
ಕರವೇ ಸಿಂಹ ಸೇನೆಯು ನಾಳೆ ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ ನಡೆಯುತ್ತಿರುವ ಮ್ಯೂಸಿಕ್ ಲೈಟ್ ಶೋ ನಾ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತು ಖ್ಯಾತ ಚಿತ್ರನಟರು ಮತ್ತಿತರೆ ಕಲಾವಿದರು ಆಗಮಿಸುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರು ಸೇರುತ್ತಾರೆ ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳುವ ಆಸನವನ್ನು ಸುಲಲಿತವಾಗಿ ಸುತತ್ರವಾಗಿ ನೆರವೇರಿಸ ಕೊಡಬೇಕೆಂದು ಮತ್ತು ಕಳೆದ ಬಾರಿ ವಿಐಪಿ ಪಾಸಿನ ನೆಪದಲ್ಲಿ ಜನರು ಪೆಂಡಾಲಿನ ಹೊರ ಭಾಗದಲ್ಲಿ ನಿಂತು ಮಳೆಯಲ್ಲಿ ನಂದಿರುವುದು ಅಂತಹ ಯಾವುದೇ ತರಹದ ಘಟನೆ ಈ ಬಾರಿಯ ಉತ್ಸವದಲ್ಲಿ ನಡೆದಂತೆ ನಡೆದುಕೊಳ್ಳಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಕಾರ್ಪೊರೇಷನ್ ಕಮಿಷನರ್ ಅವರಿಗೆ ಮನವಿಯನ್ನು ಮಾಡಿದ್ದು ಅದರಂತೆ ನಾಳೆ ನಡೆಯುವ ಕಾರ್ಯಕ್ರಮದಲ್ಲಿ ವಿ,ಐ,ಪಿ ಪಾಸಿಗೆ ಹೆಚ್ಚು ಒತ್ತು ಕೊಡುವುದನ್ನು ಬಿಟ್ಟು ನಗರದ ಮೂಲೆ ಮೂಲೆಯಿಂದ ಬಂದಿರುವಂತಹ ಸಾರ್ವಜನಿಕರಿಗೆ ಅನುಕೂಲವನ್ನು ಮಾಡಿಕೊಡಬೇಕೆಂದು ಕರವೇ ಸಿಂಹ ಸೇನೆ ಜಿಲ್ಲಾಧ್ಯಕ್ಷ ಮಧುಸೂದನ್ ನೇತೃತ್ವದಲ್ಲಿ ಆಗ್ರಹಿಸುತ್ತಿದೆ ಮೈಸೂರಿನಲ್ಲಿ ನಡೆದ ರೀತಿಯಲ್ಲಿ ಏನಾದರೂ ಆಚಾತುರ್ಯಗಳನ್ನು ನಡೆಯದಂತೆ ಶಿವಮೊಗ್ಗದಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಪಟ್ಟಂತಹ ಮ್ಯೂಸಿಕಲ್ ಲೈಫ್ ಶೋ ಅನ್ನ ಆಯೋಜನೆ ಮಾಡಬೇಕೆಂದು ಕರವೇ ಸಿಂಹ ಸೇನೆ ಮನವಿ ಮಾಡುತ್ತದೆ ನಾಳೆಯ ದಿವಸ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಇದ್ದರೆ ಸ್ಥಳದಲ್ಲೇ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಕರವೇ ಸಿಂಹ ಸೇನೆ ಎಚ್ಚರಿಕೆಯನ್ನು ನೀಡಿದೆ ಮತ್ತು ಅಂತಹ ಯಾವುದೇ ಘಟನೆಗಳು ನಡೆಯದಂತೆ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಡಳಿತದಲ್ಲಿ ಮನವಿಯನ್ನು ಸಹ ಮಾಡುತ್ತಿದೆ
Simha Sena appeals to improve seating arrangements for the public at musical nights
