SUDDILIVE || SHIVAMOGGA
ಟಿಟಿ ವಾಹನ ಪಲ್ಟಿ-12 ಜನ ಮಹಿಳೆಯರಿಗೆ ಗಾಯ-TT vehicle overturns - 12 women injured
ಕೂರನಕೊಪ್ಪ ಸಮೀಪ ಟಿಟಿ ವಾಹನ ಪಲ್ಟಿಹೊಡೆದಿದೆ. ಬೆಂಗಳೂರಿನಿಂದ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಆಗಮಿಸಿದ ಮಹಿಳೆಯರಿದ್ದ ಟಿಟಿ ವಾಹನ ಅಪಘಾತ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸಮೀಪ ಕೂರನಕೊಪ್ಪದ ಬಳಿ ಈ ಘಟನೆ ನಡೆದಿದೆ. 12 ಮಹಿಳೆಯರಿಗೆ ಹಾಗೂ ಓರ್ವ ಚಾಲಕನಿಗೆ ಗಾಯವಾಗಿದೆ.
ಬೆಂಗಳೂರಿನಿಂದ ಟ್ರೈನ್ ಮೂಲಕ ಸಾಗರಕ್ಕೆ ಆಗಮಿಸಿದ 12 ಮಹಿಳೆಯರ ತಂಡ ಸಾಗರದಿಂದ ಟಿಟಿ ವಾಹನ ಮಾಡಿಕೊಂಡು ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಹೋಗುತ್ತಿದ್ದರು. ಕೂರನಕೊಪ್ಪ ಸಮೀಪದಲ್ಲಿ ಟಿಟಿ ವಾಹನಪಲ್ಟಿಯಾಗಿದೆ.
12 ಮಹಿಳೆಯರಲ್ಲಿ ಮೂರು ಮಹಿಳೆಯರಿಗೆ ಗಂಭೀರ ಗಾಯವಾಗಿದೆ. ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
TT vehicle overturns - 12 women injured
