SUDDILIVE || SHIVAMOGGA
ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳನ್ನ ಕಳಚಿಕೊಂಡು ಹೋದ ಕಳ್ಳರು-The thieves removed the wheels of the car parked in front of the house
ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ವಾಹನದ ಮೂರು ಚಕ್ರಗಳನ್ನ ಕಳ್ಳತನ ಮಾಡಿರುವ ಘಟನೆ ವಿದ್ಯಾನಗರದ ಸುಭಾಷ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗೌತಮ್ ಎಂಬುವರ ಸ್ಯಾಂಟ್ರೋ ಕಾರಿನ ಹಿಂಬದಿಯ ಎರಡು ಚಕ್ರ ಮತ್ತು ಮುಂಭಾಗದ ಎಡಭಾಗದ ಚಕ್ರವನ್ನ ಕಳಚಿಕಕೊಂಡು ಹೋಗಿದ್ದಾರೆ. ಬಲಭಾಗದ ಚಕ್ರವೊಂದನ್ನ ಬಿಟ್ಟು ಮೂರು ಚಕ್ರಗಳನ್ನ ಎತ್ತುಕೊಂಡು ಹೋಗಿದ್ದಾರೆ.
ಕೆಎ 17 ಎನ್ 9876 ಕ್ರಮ ಸಂಖ್ಯೆಯ ಸ್ಯಾಂಟ್ರೋ ಕಾರಿನ ಅಡಿಗೆ ಕಲ್ಲುಗಳನ್ನ ಇಟ್ಟು ಕಳುವು ಮಾಡಲಾಗಿದೆ. ಕೋಟೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದ್ದಾರೆ. ಈ ಹಿಂದೆ ಇದೇ ಸುಭಾಷ್ ನಗರದ ಚಾನೆಲ್ ಏರಿಯಾದಲ್ಲಿ ಚೆಡ್ಡಿ ಗ್ಯಾಂಗ್ ಮನೆ ಕಳುವು ಪ್ರಕರಣಕ್ಕೆ ಯತ್ನಿಸಿತ್ತು.
ಈಗ ಮನೆಯ ಮುಂದಿನ ಕಾರಿನ ಚಕ್ರಗಳನ್ನ ಕಳಚಿಕೊಂಡು ಹೋಗಿದ್ದಾರೆ.
The thieves removed the wheels of the car parked in front of the house
