SUDDILIVE || SHIVAMOGGA
ಸ್ನೇಹಿತನ ಜೊತೆ ಈಜಲು ಹೋದ ಬಾಲಕ ನಾಪತ್ತೆ-Boy goes missing after going swimming with friend
ಸ್ನೇಹಿತರೊಂದಿಗೆ ಈಜಲು ಹೋದ 13 ವರ್ಷದ ಬಾಲಕನೋರ್ವ ನಾಪತ್ತೆಯಾಗಿದ್ದು ಆತನಿಗಾಗಿ ತೀವ್ರತರನಾದ ಶೋಧಕಾರ್ಯ ಮುಂದುವರೆದಿದೆ.
ಹರಿಗೆ ನಿವಾಸಿಯ ಬಾಲಕ 8 ನೇ ತರಗತಿ ಓದುತ್ತಿದ್ದು, ನಿನ್ನೆ ಮಧ್ಯಾಹ್ನ ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನದ ಬಳಿಯ ಚಾನೆಲ್ ಬಳಿ ಭದ್ರ ಚಾನೆಲ್ ಗೆ ನಾಲ್ಕೈದು ಜನ ಸ್ನೇಹಿತರೊಂದಿಗೆ ಈಜಲು ನೀರಿಗೆ ಇಳಿದಿದ್ದಾನೆ. ಸ್ನೇಹಿತರೆಲ್ಲ ಮೇಲೆ ಬಂದರೂ ಈ ಬಾಲಕ ಮೇಲೆ ದಡಕ್ಕೆ ಬರಲಿಲ್ಲ.
ನಿನ್ನೆ ಮಧ್ಯಾಹ್ನದಿಂದ ಬಾಲಕರು ನಾಪತ್ತೆಯಾದ ಸ್ನೇಹಿತನ ಹುಡುಕಾಟದಲ್ಲಿ ತೊಡಗಿದ್ದಾರೆ. ಸಂಜೆಯಾದರೂ ನಾಪತ್ತೆಯಾದ ಸ್ನೇಹಿತ ಸಿಗದಿದ್ದಾಗ ಗಾಬರಿಗೊಂಡಿದ್ದಾರೆ. ಮನೆಗೆ ಬಾರದ ಬಾಲಕನ ಪೋಷಕರು ಹುಡುಕಿಕೊಂಡು ಬಂದಿದ್ದಾರೆ. ಆಗ ಬಾಲಕ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಹತ್ತಿರದ ಪೊಲೀಸ್ ಠಾಣೆಗೆ ತಡರಾತ್ರಿ ಸಂಪರ್ಕಿಸಲಾಗಿದೆ. ತಕ್ಷಣವೇ ತುಂಗ ನಗರ ಪೊಲೀಸರು ಅಗ್ನಿಶಾಮಕ ದಳಕ್ಕೆ ಕರೆಮಾಡಿದ್ದು ಬೆಳಗ್ಗಿನ ಜಾವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಚಾನೆಲ್ ನಲ್ಲಿ ಹುಡುಗನಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ನಾಪತ್ತೆಯಾದ ಬಾಲಕನ ಹೆಸರು ಶಂಕರ್ ಎಂದು ತಿಳಿದು ಬಂದಿದೆ. ಶನಿವಾರ ತರಗತಿ ಮುಗಿಸಿಕೊಂಡು ಐದು ಜನರು ಟ್ರಿಲ್ಲರ್ ಹತ್ತಿಕೊಂಡು ಹರಿಗೆಯಿಂದ ಮಲವಗೊಪ್ಪ ಚಾನೆಲ್ ಗೆ ಬಂದಿದ್ದರು.
Boy goes missing after going swimming with friend

