SUDDILIVE || SHIVAMOGGA
ನಾಪತ್ತೆಯಾದ ಬಾಲಕ ಶವವಾಗಿ ಪತ್ತೆ-Missing boy found dead
ಸ್ನೇಹಿತರ ಜೊತೆ ಚಾನೆಲ್ ನಲ್ಲಿ ಈಜಲು ಹೋಗಿದ್ದ ಹರಿಗೆಯ 13 ವರ್ಷದ ಬಾಲಕ ಶಂಕರ್ ಶವವಾಗಿ ಪತ್ತೆಯಾಗಿದ್ದಾನೆ. ತೀವ್ರ ಶೋಧದ ನಂತರ ಬಾಲಕನ ಮೃತ ದೇಹ ಭದ್ರಾ ಚಾನೆಲ್ ನಲ್ಲಿ ಟ್ಯೂಬ್ ಬಳಿ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಸ್ಥಳದಿಂದ ಒಂದು ಕಿಲೋಮೀಟರ್ ಒಳಗಡೆ ಬಾಲಕನ ಮೃತ ದೇಹ ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನ ಹರಿಗೆಯ ಐದು ಜನ ಬಾಲಕರೊಂದಿಗೆ ನೀರಿಗೆ ಇಳಿದಿದ್ದ ಶಂಕರ್ ನಾಪತ್ತೆಯಾಗಿದ್ದನು. ಇಂದು ಮಧ್ಯಾಹ್ನದ ಹೊತ್ತಿಗೆ ಶವವಾಗಿ ಪತ್ತೆಯಾಗಿರುವುದು ಕುಟುಂಬಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ.
Missing boy found dead
