SUDDILIVE || HOSANAGARA
ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ತೆಂಗಿನಮರ- Coconut tree fell on house due to wind and rain
ಶಿವಮೊಗ್ಗ ನಗರವೂ ಸೇರಿದನತೆ ಹಲವೆಡೆ ಇಂದು ಹವಮಾನ ಇಲಾಖೆ ಹೇಳಿದಂತೆ ಮಳೆಯಾಗಿದೆ. ಮಲೆನಾಡಿನಲ್ಲಿ ಮಳೆಯಾಗುವ ಕುರಿತು ಹವಮಾನ ಇಲಾಖೆ ನಿರೀಕ್ಷಿಸಿತ್ತು. ಅದರಂತೆ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ.
ಅದರಂತೆ ಮಳೆಯ ಜೊತೆ ಗಾಳಿಯೂ ಜೋರಾಗಿ ಬೀಸಿದ ಪರಿಣಾಮ ಹೊಸನಗರ ತಾಲೂಕು ಬೆಳ್ಳೂರು ಗ್ರಾಮದ ರತ್ನಮ್ಮ ಎಂಬುವರ ಮನೆಯ ಮೇಲೆ ತೆಂಗಿನಮರ ಬಿದ್ದು ಮನೆಯಲ್ಲಿದ್ದ ಐವರು ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಸಂಜೆ ಬಿದ್ದ ಮಳೆಯ ಜೊತೆಗೆ ಗಾಳಿ ಬೀಸಿದ ಪರಿಣಾಮ ರತ್ನಮ್ಮನವರ ಹಂಚಿನ ಮನೆಯ ಮುಂದೆ ಇದ್ದ ತೆಂಗಿನ ಮರ ಬಿದ್ದಿದೆ. ನಂತರ ಬಿದ್ದ ಮಳೆಯಿಂದಾಗಿ ಮನೆಯಲ್ಲಿ ನೀರು ತುಂಬಿಕೊಂಡಿದೆ.
Coconut tree fell on house due to wind and rain
