SUDDILIVE || SHIVAMOGGA
ಹಬ್ಬಹರಿದಿನಗಳಿಗೆ ಬೇಕಾಗಿದ್ದ ವಾಸಣ್ಣನವರ ಹಸು ನಾಪತ್ತೆ- Vasanna's cow, which was needed for the festival, goes missing
ದೀಪಾವಳಿಯ ಗೋಪೂಜೆ, ಗೃಹಪ್ರವೇಶಕ್ಕೆ ಕರೆಸಲಾಗುತ್ತಿದ್ದ ವಾಸಣ್ಣನವರ ನಾಲ್ಕು ಹಸುಗಳನ್ನ ರಾತ್ರೋರಾತ್ರಿ ದುಷ್ಕರ್ಮಿಗಳು ಕದ್ದುಕೊಂಡು ಹೋಗಿದ್ದಾರೆ.
ಹೊಸಮನೆ ಅಲ್ಲಿ ಇರುವ ಹಸುಗಳು ವಾಸಣ್ಣರ ಹಸುಗಳು ಎಂದೇ ಹೆಸರುವಾಸಿಯಾಗಿದೆ. ಇವರು ಸುಮಾರು ವರ್ಷಗಳಿಂದ ಗೋವುಗಳನ್ನು ತಮ್ಮ ಮಕ್ಕಳಂತೆ ಸಾಕಿಕೊಂಡು ಬಂದಿದ್ದಾರೆ. ಮನೆಯಲ್ಲಿ ಇವರು ಒಬ್ಬರೇ ವಾಸವಾಗಿದ್ದು, ಹಸುಗಳ ಜೊತೆ... ಹೊಸಮನೆಯಲ್ಲಿ ಪ್ರತಿಯೊಬ್ಬರಿಗೂ ಚಿರ ಪರಿಚಿತ ವ್ಯಕ್ತಿಯಾಗಿದ್ದಾರೆ. ಎಲ್ಲರ ಮನೆ ಗೃಹಪ್ರವೇಶ ಎಂದರೆ , ದೀಪಾವಳಿ ಸಮಯದಲ್ಲಿ ಗೋ ಪೂಜೆ ಗೆ ಮೊದಲು ನೆನಪಾಗುವುದು ವಾಸಣ್ಣರ ಹಸುವೇ...
ಈಗ ಸುಮಾರು ವರ್ಷಗಳಿಂದ ಇವರ ಹಸುಗಳನ್ನು ಕದಿಯುತ್ತಿದ್ದಾರೆ ಹಸುಗಳ್ಳರು... ಇದುವರೆಗೂ 20ಹಸು ಮೇಲೆ ಕದ್ದಿದ್ದಾರೆ... ಪೊಲೀಸ್ ದೂರು ಕೊಟ್ಟರು ಏನು ಪ್ರಯೋಜನ ಆಗಿಲ್ಲ ಎನ್ನುತ್ತಾರೆ ವಾಸಣ್ಣ.
ಈ ಒಂದು ವರೆ ತಿಂಗಳಲ್ಲಿ ಇವರ 4ಹಸು ಕದ್ದಿದ್ದಾರೆ ಹೊಸಮನೆ ಬೀದಿ ಒಳಗೆ ಬಂದು ಕದ್ದುಯುತ್ತಿದ್ದಾರೆ.ಈಗ ಅವರು ಹಸುಗಳನ್ನು ಕಳೆದುಕೊಂಡಿರುವ ವಾಸಣ್ಣನ ಬಳಿ 3ಹಸುಗಳು ಮಾತ್ರ ಉಳಿದಿದೆ. ತುಂಬ ದುಃಖಿತ್ತರಾಗಿದ್ದಾರೆ.
Vasanna's cow, which was needed for the festival, goes missing
