SUDDILIVE || SHIVAMOGGA
ಒಂದು ಕಡೆ ಬಾಲಕ ಮತ್ತೊಂದು ಕಡೆ ವೃದ್ಧ ನಾಪತ್ತೆ-On one side, a boy and on the other, an old man are missing
ಒಂದುಕಡೆ ಬಾಲಕ ನಾಪತ್ತೆಯಾದರೆ, ಮತ್ತೊಂದು ಕಡೆ ವೃದ್ಧರೊಬ್ವರು ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಪ್ರತ್ಯೇಕವಾಗಿ ಎರಡು ಠಾಣ ವ್ಯಾಪ್ತಿಯಲ್ಲಿ ನಡದಿದೆ. ಎಜುಕೇಲ್ ರಾಜು, 15 ವರ್ಷ ವಯಸ್ಸು, ರಾಗಿಗುಡ್ಡ ಈತನು ಫೆ.25 ರಂದು ಮನೆಯಿಂದ ಹೊರಗೆ ಹೋದವನು ಈವರೆಗೆ ವಾಪಸ್ಸಾಗದೆ ಕಾಣೆಯಾಗಿದ್ದಾನೆ.
ಕಾಣೆಯಾದ ಬಾಲಕನು ಟೌನ್ ಡಿವಿಎಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದು ಸುಮಾರು 5 ಅಡಿ ಎತ್ತರ,ಸಾಧಾರಣ ಮೈಕಟ್ಟು,ಬಿಳಿ ಮೈಬಣ್ಣ,ಕೋಲು ಮುಖ ಹೊಂದಿದ್ದು ಕನ್ನಡ, ಇಂಗ್ಲೀಷ್,ತಮಿಳು,ತೆಲುಗು ಭಾಷೆ ಮಾತನಾಡುತ್ತಾನೆ. ಈತನು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್,ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈತನ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ಪಿ.ಐ ಗ್ರಾಮಾಂತರ ಪೋಲೀಸ್ ಠಾಣೆ ದೂ.ಸಂ.: 08182-261400, 261418, 9480803332, 9480803350 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಗ್ರಾಮಾಂತರ ಪೋಲಿಸ್ ಠಾಣೆ ಪ್ರಕಟಣೆ ತಿಳಿಸಿದೆ.
ಪತಿ ನಾಪತ್ತೆ
ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಕೊಪ್ಪ ವಾಸಿ ಗಿರಿಜಮ್ಮ ಎಂಬುವವರ ಪತಿ ಪರಮೇಶ್ವರಪ್ಪ ಬಿನ್ ಹನುಮಂತಪ್ಪ ಎಂಬ ಎಂಬ 65 ವರ್ಷದ ವ್ಯಕ್ತಿ ಜ.21 ರಂದು ಬೆಳಗ್ಗೆ ಮನೆಯಿಂದ ಗದ್ದೆಗೆ ಎಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ಚೆಕ್ಸ್ ಲುಂಗಿ ಧರಿಸಿರುತ್ತಾರೆ.
ಈತನ ಬಗ್ಗೆ ಸುಳಿವು ದೊರೆತಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ದೂ.ಸಂ.: 8722983310/ 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
On one side, a boy and on the other, an old man are missing
