SUDDILIVE || SHIVAMOGGA
ಮಹಿಳೆ ಸಾವು: ವಾರಸುದಾರರ ಪತ್ತೆಗೆ ಮನವಿ-Woman dies: Appeal to find heirs
ಸುಮಾರು 45 ರಿಂದ 50 ವರ್ಷದ ಮಂಜಮ್ಮ ಕೋಂ ರಾಜಪ್ಪ, ವಾಸ ಮಾರ್ನಮಿಬೈಲು, ಶಿವಮೊಗ್ಗ, ಈಕೆಯು ಗರ್ತಿಕೆರೆ ಗ್ರಾಮದಲ್ಲಿ ಟಾರ್ಪಲ್ ಕಟ್ಟಕೊಂಡು ಒಬ್ಬಳೇ ವಾಸವಿದ್ದು,
ಅನಾರೋಗ್ಯದಿಂದ ಬಳಲುತ್ತಿದ್ದಳು.ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಜನವರಿ 07 ರಂದು ಮೃತಪಟ್ಟಿರುತ್ತಾಳೆ.
ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ರಿಪ್ಪನ್ ಪೇಟೆ ಪೋಲಿಸ್ ಠಾಣೆ ಉಪ ನಿರೀಕ್ಷಕರು ದೂ.ಸಂ.:8277983045./9480803365, ಹೊಸನಗರ ವೃತ್ತ ಪೊಲೀಸ್ ನಿರೀಕ್ಷಕರು ದೂ.ಸಂ.:08185-221544/9480803337 ಹಾಗೂ ತೀರ್ಥಹಳ್ಳಿ ಉಪ ವಿಭಾಗ ಉಪಾಧೀಕ್ಷರು ದೂ.ಸಂ.:08181-220388 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
Woman dies: Appeal to find heirs
