SUDDILIVE || SHIVAMOGGA
ಜೋಕಾಲಿ ಆಡಲು ಹೋದ ಬಾಲಕಿಗೆ ಕುಣಿಕೆ ಬಿದ್ದು ಸಾವು-A girl who went on a rampage died after falling into a noose
ಜೋಕಾಲಿ ಆಡಲು ಹೋಗಿ, ಕುಣಿಕೆ ಬಿಗಿದು ಬಾಲಕಿ ಸಾವು ಕಂಡಿದ್ದಾಳೆ. ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಮೂರು ದಿನ ಹಿಂದೆ ದುರ್ಘಟನೆ ನಡೆದಿದೆ.
ರೂಮ್ ಬಾಗಿಲು ಹಾಕಿ, ಜೋಕಾಲಿ ಆಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮೃತ ಬಾಲಕಿಯನ್ನ ಶಿವಮೊಗ್ಗದ ವಿದ್ಯಾನಗರದ ಪ್ರಣಮ್ಯ(9) ಎಂದು ಗುರುತಿಸಲಾಗಿದೆ.
3 ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೇಸಿಗೆ ರಜೆ ಕಳೆಯಲು ಚಿಕ್ಕಮ್ಮನ ಮನೆಗೆ ಹೋಗಿದ್ದ ಪ್ರಣಮ್ಯಳಿಗೆ ಜೋಕಾಲಿಯ ಹಗ್ಗವೇ ಉರುಳಾಗಿ ಪರಿಣಮಿಸಿದೆ. ಪಂಚೆ ಕಟ್ಟಿ ಜೋಕಾಲಿ ಮಾಡಿಕೊಂಡು ಆಡುತ್ತಿದ್ದಾಗ ಘಟನೆ ನಡೆದಿದೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A girl who went on a rampage died after falling into a noose

