SUDDILIVE || SHIVAMOGGA
ನ್ಯೂ ಮಂಡ್ಲಿಯ ಸಾಮಿಲ್ ನಲ್ಲಿ ಬೆಂಕಿ ಲಕ್ಷಾಂತರ ರೂ. ಮೌಲ್ಯದ ಮರಗಳು ಬೆಂಕಿಗೆ ಆಹುತಿ-Fire breaks out at New Mandli sawmill, trees worth lakhs of rupees gutted
ಶಿವಮೊಗ್ಗದ ಪ್ರತಿಷ್ಠಿತ ಸಾಮಿಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 2 ಕೋಟಿಗೂ ಅಧಿಕ ಬೆಲೆಬಾಳುವ ಮರಗಳಿಗೆ ಬೆಂಕಿಗೆ ಕಾಣಿಸಿಕೊಂಡಿದ್ದು ಅವುಗಳಲ್ಲಿ ಎರಡು ಲಕ್ಷ ರೂ ಮೌಲ್ಯದ ಮರಗಳು ಬೆಂಕಿಗೆ ಆಹುತಿಯಾಗಿವೆ. ಘಟನೆ ಇಂದು ಸಂಜೆ 5-30 ರಿಂದ 6 ಗಂಟೆಯ ವೇಳೆಗೆ ನಡೆದಿದೆ.
ನ್ಯೂ ಮಂಡಳಿಯ 100 ಫೀಟ್ ರೋಡ್ ನಲ್ಲಿರುವ ಶ್ರೀ ರೇಣುಕಾ ಶಾ ಮಿಲ್ ಅಂಡ್ ವುಡ್ ಇಂಡಸ್ಟ್ರಿಯಲ್ಲಿ ಕೋಟ್ಯಾಂತರ ಬೆಲೆಬಾಳುವ ಟಿಂಬರ್ ಗಳಿದ್ದು ಅವುಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಇಂಡಸ್ಟ್ರೀಸ್ ನ ಮಾಲೀಕರು ಆಜಾದ್ ನಗರದ ವಾಸಿ ಗುರುಮೂರ್ತಿ ಎಂಬುವರಿಗೆ ಸೇರಿದೆ ಎಂದು ಹೇಳಲಾಗುತ್ತಿದೆ.
ಬೆಂಕಿಯಲ್ಲಿ ಸುಮಾರು ಲಕ್ಷಾಂತರ ಬೆಲೆಬಾಳುವ ಮರಗಳಗಳಿದ್ದು ಅದರಲ್ಲಿ ಅನೇಕ ಮರಗಳು ಬೆಂಕಿಗೆ ಆಹುತಿಯಾಗಿ ಮೂರು ಲಕ್ಷ ಲಾಸ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ತಕ್ಷಣವೇ ಅಗ್ನಿಶಾಮಕ ದಳ ಆಗಮಿಸಿದ ಪರಿಣಾಮ ಒಂದು ಕೋಟಿ 97 ಲಕ್ಷ ರೂ. ಮೌಲ್ಯದ ಮರಗಳನ್ನ ಸೇವ್ ಮಾಡಿರುವುದಾಗಿ ತಿಳಿದು ಬಂದಿದೆ.
ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ RFO ರಾಜು, DFO ಅಶೋಕ್, FSO ಮಕ್ತುಮ್ ಹುಸೇನ್ LF ಸುನಿಲ್, FD ಸತೀಶ್ ಗಣೇಶ್, ಸಂಗಮೇಶ್, ರಮೇಶ್ , ನಾಗರಾಜ್ , FM ವೆಂಕಟೇಶ್ ಇರಿ ಸ್ವಾಮಿ ಮಾರುತಿ ಯಶವಂತ ವಿಜಯ್ ಮಹಮ್ಮದ್ ಹುಸೇನ್ ಪಾಲ್ಗೊಂಡಿದ್ದರು.
Fire breaks out at New Mandli sawmill, trees worth lakhs of rupees gutted

