SUDDILIVE || SHIVAMOGGA
ಪೆಟ್ರೋಲ್ ಅಭಾವ, ಸೊರಬದಲ್ಲಿ ಒಂದು ಬಂಕ್ ಗೆ ಮುಗಿಬಿದ್ದ ಗ್ರಾಹಕರು-Petrol shortage, customers stranded at a petrol station in Soraba
ಇರಾನ್ - ಇಸ್ರೇಲ್ ನಡುವೆ ಯುದ್ಧದ ಪರಿಣಾಮದಿಂದಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಪೆಟ್ರೋಲ್ ಕೊರತೆ ಕಂಡು ಬಂದಿದೆ. ಸಂಜೆ 4½ ತನಕ ಈ ಪೆಟ್ರೋಲ್ ಅಭಾವ ಕಂಡುಬಂದಿದೆ.
ಪೆಟ್ರೋಲ್ ಗಾಗಿ ಬಂಕ್ ನಲ್ಲೇ ಗ್ರಾಹಕರ ನಡುವೆ ಗಲಾಟೆ ನಡೆದಿದೆ. ಸೊರಬದ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ. ಸೊರಬ ಪಟ್ಟಣದ 6 ಪೆಟ್ರೋಲ್ ಬಂಕ್ ಗಳಲ್ಲಿ 5 ರಲ್ಲಿ ಸ್ಟಾಕ್ ಇಲ್ಲದಂತಾಗಿತ್ತು.
ಲಭ್ಯವಿರುವ ಒಂದು ಪೆಟ್ರೋಲ್ ಬಂಕ್ ಗೆ ಜನರು ಮುಗಿಬಿದ್ದಿದ್ದರು. ಬಂಕ್ ಗೆ ವಾಹನಗಳ ಜೊತೆ ಬಾಟಲ್ ಕೂಡ ಗ್ರಾಹಕರು ತಂದಿದ್ದಾರೆ. ಬಂಕ್ ಸಿಬ್ಬಂದಿ ಬಾಟಲ್ ಗೆ ಪೆಟ್ರೋಲ್ ಹಾಕಲು ನಿರಾಕರಿಸಿದ್ದಕ್ಕೆ ಗಲಾಟೆ ಸಹ ನಡೆದಿದೆ. ಅವಾಚ್ಯ ಶಬ್ಧದಿಂದ ಬಂಕ್ ಸಿಬ್ಬಂದಿಗೆ ನಿಂದನೆ, ತಳ್ಳಾಟ -ನೂಕಾಟವಾಗಿದೆ. ಸಂಜೆ 4½ ನಂತರ ಪೆಟ್ರೋಲ್ ಬಂಕ್ ನಲ್ಲಿ ಪೂರೈಕೆಯಾಗಿ ಪರಿಸ್ಥಿತಿ ನಿಯಂತ್ರವಾಗಿದೆ.
ಸೊರಬ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು ಸಾಗರ ತಾಲೂಕಿನ ಆನಂದಪುರದಲ್ಲಿಯೂ ಪೆಟ್ರೋಲ್ ಅಭಾವ ಕಂಡು ಬಂದಿತ್ತು.
Petrol shortage, customers stranded at a petrol station in Soraba

