SUDDILIVE || SHIVAMOGGA
ತುಂತುರುವಿನಲ್ಲಿ ಕೆಲಸಕ್ಕೆ ಬಂದ ಮಹಿಳೆ ವಿದ್ಯುತ್ ಶಾಕ್ ಹೊಡೆದು ಸಾವು- Woman dies after getting electrocuted while coming to work in Tunthuru
![]() |
| ಸಾಂಧರ್ಭಿಕ ಚಿತ್ರ |
ಶಿವಮೊಗ್ಗದ ಹೊರಭಾಗದಲ್ಲಿರುವ ತುಂತುರುವಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಿರ್ಮಿಸಲಾಗಿದ್ದ ದೀಪದ ಅಲಂಕಾರದ ವಿದ್ಯುತ್ ಶಾಕ ಹೊಡೆದು ಕೂಲಿಗಾಗಿ ಬಂದಿದ್ದ 54 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ತುಂತುರುವಿನಲ್ಲಿ ಇಂದು ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಬ್ಬಲಗೆರೆಯಿಂದ ಕೂಲಿಕೆಲಸಕ್ಕಾಗಿ ನಾಗಮ್ಮ ಎಂಬ 54 ವರ್ಷದ ಮಹಿಳೆಯನ್ನ ಸ್ವಚ್ಛಗೊಳಿಸುವ ಗುತ್ತಿಗೆದಾರ ಕರೆತಂದಿದ್ದ. ಕೆಲಸ ಮಾಡುವ ವೇಳೆ ವೇದಿಕೆಗೆ ವಿದ್ಯುತ್ ದೀಪದ ಅಲಂಕಾರ ಮಾಡಿದ್ದ ವಯರ್ ಗಳನ್ನ ಕಂಬಕ್ಕೆ ಕಟ್ಟಲಾಗಿತ್ತು.
ಅಚಾನಕ್ ಆಗಿ ವಿದ್ಯುತ್ ವಯರ್ ಗಳನ್ನ ಕಟ್ಟಿದ್ದ ಕಂಬವನ್ನ ಮುಟ್ಟಿದ ನಾಗಮ್ಮನಿಗೆ 220 ವೋಲ್ಟೇಜ್ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದೆ. ನಿಶ್ಚಿತಾರ್ಥಕ್ಕೆ ಬಂದವರಲ್ಲಿ ಒಬ್ಬರು ಮಹಿಳೆ ಬಿದ್ದಿರುವುದನ್ನ ನೋಡಿ ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ತರುವ ಮಾರ್ಗದಲ್ಲಿಯೇ ಮಹಿಳೆ ಅಸುನೀಗಿದ್ದಾರೆ. ತುಂಗ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
Woman dies after getting electrocuted while coming to work in Tunthuru


