SUDDILIVE || SHIVAMOGGA
ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರ ಕಿತ್ತುಕೊಂಡು ಪರಾರಿಯಾದ ಯುವಕರು-Youths snatched a gold chain from a woman's neck and fled
ಶಿವಮೊಗ್ಗದ ಹೊರವಲಯದಲ್ಲಿ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹೊಳಲೂರು ಗ್ರಾಮದಲ್ಲಿ ಮಂಗಳ ಎಂಬುವರು ತನ್ನ ಸ್ನೇಹಿತೆ ಶೀಲಾ ಎಂಬುವರ ಜೊತೆ ಹೊಳಲೂರು ಮಂಡಲ ಪಂಚಾಯಿತಿಯಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸಭೆಗೆ ಭಾಗವಹಿಸಲು ಗ್ರಾಮದ ಪಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಅಪರಿಚಿತ ಅವರ ಕುತ್ತಿಗೆಯಲ್ಲಿದ್ದ ಬಂಗಾರ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಮುಂದಾಗಿದ್ದಾನೆ.
ಈ ವೇಳೆ ಮಂಗಳಾರವರು ಕೆಳಗೆ ಬಿದ್ದಿದ್ದಾರೆ ಕಿತ್ತುಕೊಂಡು ಹೋಗುವಾಗ ಅವರ ಸ್ನೇಹಿತೆ ಶಿಲಾ ರವರು ಸಹ ಕಳ್ಳ ಕಳ್ಳ ಎಂದು ಹೇಳುತ್ತಾ ಅವರು ಹಿಂದೆ ಸಾಗಿದ್ದಾರೆ ಅಕ್ಕಪಕ್ಕದವರು ಬಂದರು ಸಹ ಆತ ಮತ್ತೊಂದು ಬೈಕಿನಲ್ಲಿ ಪಾಸಾಗಿದ್ದಾನೆ. ಸಹಾಯಕ್ಕೆ ಬಂದ ಸ್ಥಳೀಯರು ಆತನನ್ನ ಹುಡುಕಲು ಸಾಧ್ಯವಾಗಿಲ್ಲ.
35 ಗ್ರಾಂ ಬಂಗಾರದ ಮಾಂಗಲ್ಯಸರ ಕಳುವಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.
Youths snatched a gold chain from a woman's neck and fled
