ಶಿರಾಳಕೊಪ್ಪ-ಅಡಿಕೆ ಕಳವು ಆರೋಪಿಗಳ ಬಂಧನ-Shiralakoppa-Areca Nut theft suspects arrested

SUDDILIVE || SHIVAMOGGA

ಶಿರಾಳಕೊಪ್ಪ-ಅಡಿಕೆ ಕಳವು ಆರೋಪಿಗಳ ಬಂಧನ-Shiralakoppa-Areca Nut theft suspects arrested     

Shiralkoppa, arecanut


ಅಡಿಕೆ ಕಳವು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಶಿಕಾರಿಪುರ ಪೊಲೀಸರು ಬಂಧಿಸಿದ್ದಾರೆ. 

ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಶಿಕಾರಿಪುರ ತಾಲ್ಲೂಕು ಹುಣಸೇಕಟ್ಟೆ ಗ್ರಾಮದ ವಾಸಿಯಾದ ಶ್ರೀ ಭುವನೇಶ್ವರ್ ರವರು  ಮಾ. 26 ರಂದು ರಾತ್ರಿ ಮತ್ತು ಮಾ.27ರಂದು ಬೆಳಗ್ಗೆಯ ಮಧ್ಯದ  ಆಕಾಶ್ ಬಿನ್ ಡಾಕಪ್ಪ ರವರಿಗೆ ಸೇರಿದ ಖಾಲಿ ಜಾಗದಲ್ಲಿ ಸುಮಾರು 16 ಕ್ವೀಂಟಲ್ ಸಿಪ್ಪೆ ಗೋಟು ಅಡಿಕೆಯನ್ನು ಒಣ ಹಾಕಲಾಗಿತ್ತು. 

ಅದರಲ್ಲಿ 1,00,000/- ರೂ ಮೌಲ್ಯದ ಸುಮಾರು 04  ಕ್ವಿಂಟಾಲ್ ಒಣಗಿದ ಸಿಪ್ಪೆ ಗೋಟು ಅಡಿಕೆಯನ್ನು ಕಳ್ಳತನವಾಗಿತ್ತು.  ಕಳ್ಳರನ್ನು ಪತ್ತೇ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಕಳುವಾಗಿರುವ ಸಿಪ್ಪೆ ಗೋಟು ಅಡಿಕೆಯನ್ನು ಕೊಡಿಸಬೇಕಾಗಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ತನಿಖೆ ಕೈಗೊಂಡಿರುತ್ತದೆ. 

ನಂತರ ಸದರಿ ಕಳುವಾದ ಸಿಪ್ಪೆ ಗೋಟು ಅಡಿಕೆ ಹಾಗೂ ಆರೋಪಿತರ ಪತ್ತೆ ನಿಮಿತ್ತವಾಗಿ ಮಾನ್ಯ ಶ್ರೀ ನಿಖಿಲ್ ಬಿ ಐ.ಪಿ.ಎಸ್. ಪೊಲೀಸ್‌ ಅಧೀಕ್ಷಕರು, ಅಡಿಷನ್ ಎಸ್ಪಿ ಎಂ..ಜಿ ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಕೇಶವ.   ಸಂತೋಷ್ ಎಂ ಪಾಟೀಲ್ ಸಿಪಿಐರವರುಗಳ ಮಾರ್ಗದರ್ಶನದಲ್ಲಿ ಶ್ರೀ ಪ್ರಶಾಂತ ಕುಮಾರ ಟಿ.ಬಿ ಪಿ,ಎಸ್,ಐ ಶಿರಾಳಕೊಪ್ಪ ಠಾಣೆ ರವರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದು ಸದರಿ ಅರೋಪಿಗಳು ಸಿಪ್ಪೆ ಗೋಟು ಅಡಿಕೆ ಕಳವು ಮಾಡಿದ್ದು ಒಪ್ಪಿಕೊಂಡ ಮೇರೆಗೆ ಸದರಿ ಆರೋಪಿಗಳಿಂದ ಪ್ರಕರಣಕ್ಕೆ ಸಂಬಂದಿಸಿದಂತೆ ಕೃತ್ಯಕ್ಕೆ ಉಪಯೋಗಿಸಿದ್ದ ವಾಹನ ಮತ್ತು 10 ಪ್ಲಾಸ್ಟೀಕ್ ಚೀಲದಲ್ಲಿ ತುಂಬಿದ ಒಟ್ಟು 4 ಕ್ವಿಂಟಾಲ್ ಸಿಪ್ಪೆ ಗೋಟುಗಳನ್ನು ವಶಪಡಿಸಿಕೊಳ್ಳಲಾಗುದೆ.  

ಇದರ ಒಟ್ಟು ಮೌಲ್ಯ 1,00,000/- ಆಗಿರುತ್ತದೆ ಹಾಗೂ ಇದರೊಂದಿಗೆ ಕೃತ್ಯಕ್ಕೆ ಉಪಯೋಗಿಸಿದ್ದ ಕೆಎ 15 ಎ 9651 ರ ಮಾರುತಿ ಸುಜುಕಿ ಸೂಪರ್ ಕ್ಯಾರಿ ಗೂಡ್ಸ್ ವಾಹನವನ್ನು ಅಮಾನತ್ತುಪಡಿಸಿಕೊಂಡಿದ್ದು* ಇದರ ಅಂದಾಜು ಮೌಲ್ಯ 5,00,000/- ರೂ ಗಳಗಿದ್ದು ಒಟ್ಟು 6,00,000/- ರೂ ಮೌಲ್ಯದ ಸ್ವತ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ದಸ್ತಗಿರಿ ಮಾಡಲಾದ ಆರೋಪಿತರು

ಎ1. ಮಹವ್ಮದ್ ಮನ್ಸೂರ್, 30 ವರ್ಷ, ವಾಸ ಕುಂಬಾರ್ ಗುಂಡಿ ಕೊಪ್ಪಲು,  ಶಿಕಾರಿಪುರ ಟೌನ್, ಶಿಕಾರಿಪುರ ತಾ. ಶಿವಮೊಗ್ಗ ಜಿಲ್ಲೆ ಎ2. ಷಹಾದ ಉಲ್ಲಾ, 35 ವರ್ಷ, ವಾಸ ಗಬ್ಬೂರು ಶಿಕಾರಿಪುರ ಟೌನ್ ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

Shiralakoppa-Areca Nut theft suspects arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close