ರಾಷ್ಟ್ರವೇ ಹಿಂದುರುಗಿ ನೋಡುವಂತೆ ನಮ್ಮ ವಿವಿಗಳು ಮಾಡಿವೆ-ಡಾ.ಸುಧಾಕರ್-Our universities have made the nation look backward - Dr. Sudhakar

SUDDILIVE || SHIVAMOGGA

ರಾಷ್ಟ್ರವೇ ಹಿಂದುರುಗಿ ನೋಡುವಂತೆ ನಮ್ಮ ವಿವಿಗಳು ಮಾಡಿವೆ-ಡಾ.ಸುಧಾಕರ್-Our universities have made the nation look backward - Dr. Sudhakar    

University, Sudhakar

ಕುವೆಂಪು ವಿಶ್ವವಿದ್ಯಾಲಯ ಕಳೆದ ಮೂರು ದಶಕಗಳಿಂದ ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಹಲವಾರು ಮಾನದಂಡಗಳಲ್ಲಿ ರಾಜ್ಯದ ಇತರೆ ವಿಶ್ವವಿದ್ಯಾಲಯಗಳನ್ನು ಹಿಂದಿಕ್ಕಿ ಇಡೀ ರಾಷ್ಟವೇ ತನ್ನತ್ತ ತಿರುಗಿ ನೋಡುವಂತಹ ಸಾಧನೆಯನ್ನ ನಮ್ಮ ವಿಶ್ವ ವಿದ್ಯಾಲಯಗಳು ಮಾಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು. 

ಇಂದು ಶಂಕರ ಘಟ್ಟದಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ 35 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,  ಕುವೆಂಪು ವಿವಿಯು ನ್ಯಾಕ್‌ನಿಂದ ‘ಎ’ ಶ್ರೇಣಿ, ಎನ್‌ಐಆರ್‌ಎಫ್‌ನಲ್ಲಿ ಉತ್ತಮ ಸ್ಥಾನ, ಕೆಎಸ್‌ಯುಆರ್‌ಎಫ್‌ನಲ್ಲಿ ಮೂರನೇ ಸ್ಥಾನ, ಸತತ ಐದು ವರ್ಷಗಳಿಂದ ಹೆಚ್ ಇಂಡೆಕ್ಸನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲೇ ಅಗ್ರ ಸ್ಥಾನ, ಹೀಗೆ ಕಳೆದ ದಶಕದಿಂದೀಚೆಗೆ ರಾಜ್ಯದ ಶೈಕ್ಷಣಿಕ ರಂಗದಲ್ಲಿ ಮಹತ್ವದ ಸಂಸ್ಥೆಗಾಗಿ ಬೆಳೆದು ನಿಂತಿದೆ ಎಂದರು. 

ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಸುಮಾರು 17 ಪ್ರಾಜೆಕ್ಟ್ಗಳನ್ನು ನಡೆಸಲಾಗುತ್ತಿದ್ದು, 04 ಪೇಟೆಂಟ್‌ಗಳನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹೊಂದಿದ್ದಾರೆ. ಅಲ್ಪಾವಧಿಯಲ್ಲಿಯೇ ಇಂತಹ ಅಭೂತಪೂರ್ವ ಸಾಧನೆ ಮಾಡಿರುವ ಕುವೆಂಪು ವಿಶ್ವವಿದ್ಯಾಲಯ ಮಲೆನಾಡಿನ ಶೈಕ್ಷಣಿಕ ಕಾಶಿ ಎಂದರೆ ತಪ್ಪಾಗಲಾರದು. 

ವಿಶ್ವವಿದ್ಯಾಲಯದಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಶಿಕ್ಷಣ ನಿಕಾಯಗಳನ್ನೊಳಗೊಂಡು 33 ವಿಭಾಗಗಳಿದ್ದು, 45ಕ್ಕೂ ಹೆಚ್ಚು ಕೋರ್ಸ್ಗಳನ್ನು ನಡೆಸಲಾಗುತ್ತಿದೆ. ಕಡೂರು ಮತ್ತು ಚಿಕ್ಕಮಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿರುವ ವಿಶ್ವವಿದ್ಯಾಲಯ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 110 ಪದವಿ ಕಾಲೇಜುಗಳನ್ನು ಮುನ್ನಡೆಸುತ್ತಿದೆ. ವಿಶ್ವವಿದ್ಯಾಲಯ ಸುಸಜ್ಜಿತ ಜ್ಞಾನಸಹ್ಯಾದ್ರಿ ಮುಖ್ಯಾವರಣದಲ್ಲಿ ಪ್ರತಿ ವರ್ಷ 2500 ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸತಿ ಸೌಲಭ್ಯದೊಂದಿಗೆ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರು. 

ಉದ್ಯೋಗ ಮಾರುಕಟ್ಟೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸ್ಪೋಕನ್ ಇಂಗ್ಲೀಷ್, ಸಂವಹನ ಕೌಶಲಗಳು, ಕಂಪ್ಯೂಟರ್ ತರಬೇತಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳನ್ನು ವಿಶ್ವವಿದ್ಯಾಲಯ ಆರಂಭಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರವಾಗಿ ತರಬೇತಿ ನೀಡಲು ವಿಶೇಷ ಘಟಕವನ್ನು ಪ್ರಾರಂಭೀಸಲಾಗಿದೆ. ವೃತ್ತಿಯಾಧರಿತ ಕೌಶಲ್ಯಗಳನ್ನು ಒಳಗೊಂಡಿರುವ ಯುವಜನರನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುವಲ್ಲಿ ಸರ್ಕಾರ ಶ್ರಮಿಸುತ್ತಿದೆ.

ಇಂತಹ ವಿಶ್ವವಿದ್ಯಾಲಯದಿಂದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ, ಸ್ವರ್ಣಪದಕ, ನಗದು ಬಹುಮಾನ, ಪಿ.ಹೆಚ್.ಡಿ ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಳನ್ನು, ಸಂಶೋಧನಾರ್ಥಿಗಳನ್ನು ಅಭಿನಂದಿಸುತ್ತಾ ಅವರುಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ನಮ್ಮ ದೇಶಕ್ಕೆ ಕೀರ್ತಿ ತರಲೆಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದು ಹೇಳಿದರು. 

Our universities have made the nation look backward - Dr. Sudhakar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close