SUDDILIVE || SAGARA
ನಾಗರ ಹಾವು ಕಚ್ಚಿ ಗರ್ಭಿಣಿ ಸಾವು- Pregnant woman dies after being bitten by cobra
ನಾಗರ ಹಾವು ಕಚ್ಚಿ ಗರ್ಭಿಣಿಯೊಬ್ಬರು ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಸುಳುಗೋಡು ಗ್ರಾಮದಲ್ಲಿ ಇಂದು ಘಟನೆ ಸಂಭವಿಸಿದೆ.
ಸುಳುಗೋಡಿನ ವೀರಭದ್ರ ಅವರ ಪತ್ನಿ ಸ್ವಾತಿ (26) ಮೃತ ದುರ್ದೈವಿ. ಎರಡು ವರ್ಷಗಳ ಹಿಂದೆಯಷ್ಟೇ ಇವರ ವಿವಾಹವಾಗಿತ್ತು.
ಹೇಗಾಯ್ತು ಘಟನೆ?
ಸ್ವಾತಿ ಅವರು ತಮ್ಮ ಮನೆಯ ಹಿತ್ತಲಿನಲ್ಲಿದ್ದಾಗ ಹಾವು ಕಚ್ಚಿದೆ. ಕುಟುಂಬದವರು ತಕ್ಷಣವೇ ಅವರನ್ನು ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಮಾರ್ಗಮಧ್ಯೆಯೇ ಸ್ವಾತಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Pregnant woman dies after being bitten by cobra
