ಮದುವೆ ಮನೆಯಲ್ಲಿ ಚಿನ್ನಾಭರಣದ ಕಳುವು ಪ್ರಕಣ, ಆರೋಪಿಗಳು ಬಂಧನ- Jewelry theft reported from wedding house, accused arrested

SUDDILIVE || SHIVAMOGGA

ಮದುವೆ ಮನೆಯಲ್ಲಿ ಚಿನ್ನಾಭರಣದ ಕಳುವು ಪ್ರಕಣ, ಆರೋಪಿಗಳು ಬಂಧನ-  Jewelry theft reported from wedding house, accused arrested   

 

Jewellery, theft


ಇತ್ತೀಚೆಗೆ ಸರ್ಜಿ ಕನ್ವೆಷನಲ್ ಹಾಲ್ ನಲ್ಲಿ ಕಳುವಾದ ಚಿನಾಭರಣದ ಪ್ರಕರಣವನ್ನ ವಿನೋಬ ನಗರ ಪೊಲೀಸರು ಭೇಧಿಸಿ ಆರೋಒಇಗಳನ್ನ ಪತ್ತೆಹಚ್ಚಿದ್ದಾರೆ. 

 ಏ.29. ರಂದು ನವುಲೆ ಸರ್ಜಿ ಕನ್ವೆಷನ್ ಹಾಲ್ ನಲ್ಲಿ ಮದುವೆಯ ಸಮಯದಲ್ಲಿ ರೂಮ್ ಗಳಲ್ಲಿ ಬ್ಯಾಗ್ ನಲ್ಲಿಟ್ಟಿದ್ದ ಒಟ್ಟು 28 ಗ್ರಾಂ ತೂಕದ ಬಂಗಾರದ ಆಭರಣಗಳು ಕದ್ದ ಪ್ತಕರಣವನ್ನ ಸದಾಶಿವಪ್ಪ ವಾಸ ತೇವರ ಚಟ್ನಹಳ್ಳಿ ಗ್ರಾಮಸ್ಥರು  ವಿನೋಬ ನಗರದ ಪೊಲೀಸ್ ಠಾಣೆಯಲಗಲಿ ದಞುರು ನೀಡಿದ್ದರು.

ಪ್ರಕರಣದಲ್ಲಿ ಕಳವು ಮಾಡಿಕೊಂಡು ಹೋದ ಬಂಗಾರದ ಆಭರಣಗಳು ಮತ್ತು ಆರೋಪಿತರನ್ನು ಪತ್ತೆ ಮಾಡಲು ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ,  ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಸುರೇಶ್ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ( ಪ್ರಭಾರ ) ರವರ ಉಸ್ತುವಾರಿಯಲ್ಲಿ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ರಾಜು ಕೆ ಆರ್ ಸಿಪಿಸಿ, ಚಂದ್ರಾನಾಯ್ಕ ಬಿ ಸಿಪಿಸಿ, ಮಲ್ಲಪ್ಪ ಎಸ್ ಜಿ ಸಿಪಿಸಿ,  ಅರುಣಕುಮಾರ್ ಎನ್ ಕೆ ಸಿಪಿಸಿ, ಮನುಶಂಕರ ಸಿಪಿಸಿ, ರವರ ತಂಡ ರಚಿಸಲಾಗಿರುತ್ತದೆ. 

ಆರೋಪಿತರ ಪತ್ತೆಯಲ್ಲಿದ್ದಾಗ ಮಾಹಿತಿ ಸಂಗ್ರಹಿಸಿ ಮೇಲ್ಕಂಡ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಮತ್ತು ಆರೋಪಿ ಅಮ್ಜದ್ ಖಾನ್ @ ಅಂಜು ಬಿನ್ ಹಬೀಬುಲ್ಲಾ ಖಾನ್ 29 ವರ್ಷ  ಶರಾವತಿ ನಗರ ಆಟೋ ಕಾಂಪ್ಲೇಕ್ಸ್ ಶಿವಮೊಗ್ಗ ಈತನನ್ನು ಪ್ರಕರಣ ದಾಖಲಾಗಿ 06 ಗಂಟೆಯೊಳಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಅಭಿರಕ್ಷೆಗೊಳಪಡಿಸಿ ನಂತರ ಆರೋಪಿತನನ್ನು ಬಂಧಿಸಿ ಆರೋಪಿ  ಕಡೆಯಿಂದ ಪ್ರಕರಣದಲ್ಲಿ ಕಳವು ಮಾಡಿಕೊಂಡು 24 ಗ್ರಾಂ ತೂಕದ ಬಂಗಾರದ ಆಭರಣಗಳು ಅದರ ಬೆಲೆ 3,75,೦೦೦ ಮತ್ತು ಕೃತ್ಯಕ್ಕೆ ಬಳಸಿದ 2,10,000/- ರೂ  ಮೌಲ್ಯದ 02 ಬೈಕ್‌ ಗಳು ಸೇರಿ ಒಟ್ಟು ಅಂದಾಜು ಮೌಲ್ಯ 5,85,೦೦೦/- ರೂ ಗಳ ಮಾಲು ವಶ ಪಡಿಸಿಕೊಳ್ಳಲಾಗಿದೆ. 

ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ.  ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.

Jewelry theft reported from wedding house, accused arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close