ಮೆಸ್ಕಾಂ ತುರ್ತು ಕಾಮಗಾರಿ: ಜೂನ್ 9ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ-MESCOM emergency work: Power outage in many areas on June 9th

 SUDDILIVE || SHIVAMOGGA

ಮೆಸ್ಕಾಂ ತುರ್ತು ಕಾಮಗಾರಿ: ಜೂನ್ 9ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ-MESCOM emergency work: Power outage in many areas on June 9th     
Power, Outage

ಶಿವಮೊಗ್ಗ, ಜೂನ್ 8: ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್-12 ಫೀಡರ್‌ನಲ್ಲಿ ಮೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 9ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳಲ್ಲಿ ಆಲ್ಕೊಳ, ಎಸ್.ಎಲ್.ವಿ ಬಡಾವಣೆ, ಗಜಾನನ ಲೇಔಟ್, ಐಶ್ವರ್ಯ ಬಡಾವಣೆ, ಜೆ.ಎಚ್. ಪಟೇಲ್ ಬಡಾವಣೆ (ಎ, ಬಿ, ಸಿ, ಡಿ, ಇ, ಎಫ್ ಬ್ಲಾಕ್), ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಬಡಾವಣೆ, ಆದರ್ಶ ನಗರ, ಸಹ್ಯಾದ್ರಿನಗರ, ಸೋಮಿನಕೊಪ್ಪ, ವಿಜಯಲಕ್ಷ್ಮಿ ಲೇಔಟ್, ಸೋಮನಾಥ ಬಡಾವಣೆ, ನಿಸರ್ಗ ಲೇಔಟ್, ಹೊಂಗಿರಣ ಬಡಾವಣೆ ಹಾಗೂ ಸೋಮಿನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳು ಸೇರಿವೆ.

ಕಾಮಗಾರಿ ಅವಧಿಯಲ್ಲಿ ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿದೆ.

MESCOM emergency work: Power outage in many areas on June 9th

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close