SUDDILIVE || SHIVAMOGGA
ಶಿವಮೊಗ್ಗದಲ್ಲಿ 23 ವರ್ಷದ ಯುವತಿ ಕಾಣೆ; ಮಾಹಿತಿ ನೀಡುವಂತೆ ಪೊಲೀಸರ ಮನವಿ- 23-year-old woman missing in Shivamogga; Police appeal for information
ಶಿವಮೊಗ್ಗ, ಜುಲೈ 20: ಶಿವಮೊಗ್ಗ ನಗರದ ಸೀಗೆಹಟ್ಟಿ ಪ್ರದೇಶದ ವಂದನಾ ಟಾಕೀಸ್ ಸಮೀಪ ವಾಸವಾಗಿರುವ 23 ವರ್ಷದ ಸಂಗೀತ ಎಂಬ ಯುವತಿ ಜುಲೈ 7ರಂದು ಮನೆಯಿಂದ ಹೊರಗೆ ತೆರಳಿದ ಬಳಿಕ ಇದುವರೆಗೆ ಮನೆಗೆ ಮರಳದಿರುವ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರಿಂದ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕಾಣೆಯಾಗಿರುವ ಸಂಗೀತ ಸುಮಾರು 4.8 ಅಡಿ ಎತ್ತರ ಹೊಂದಿದ್ದು, ಕೋಲುಮುಖ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದಾರೆ. ಅವರ ಗದ್ದದ ಮೇಲೆ ಹಳೆಯ ಗಾಯದ ಗುರುತು ಇದ್ದು, ಸ್ವಲ್ಪ ಕುಂಟುತ್ತಾ ನಡೆಯುವ ವಿಶೇಷ ಲಕ್ಷಣ ಹೊಂದಿದ್ದಾರೆ. ಅವರು ಕನ್ನಡ ಹಾಗೂ ತಮಿಳು ಭಾಷೆಗಳನ್ನು ಮಾತನಾಡುತ್ತಾರೆ.
ಮನೆಯಿಂದ ಹೊರಡುವ ಸಂದರ್ಭದಲ್ಲಿ ಕಪ್ಪು ಬಣ್ಣದ ಚೂಡಿದಾರ್ ಹಾಗೂ ಕಪ್ಪು ಸ್ವೆಟರ್ ಧರಿಸಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಯುವತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಂಪರ್ಕ ಸಂಖ್ಯೆ:
- ದೊಡ್ಡಪೇಟೆ ಪೊಲೀಸ್ ಠಾಣೆ: 08182-261414
- ಮೊಬೈಲ್: 9480803345
- ಮೊಬೈಲ್: 6362856914
ಕಾಣೆಯಾದ ಯುವತಿಯ ಕುರಿತು ಯಾವುದೇ ಮಾಹಿತಿ ಹೊಂದಿರುವ ಸಾರ್ವಜನಿಕರು ವಿಳಂಬ ಮಾಡದೆ ಮೇಲ್ಕಂಡ ದೂರವಾಣಿ ಸಂಖ್ಯೆಗಳ ಮೂಲಕ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
