ಡ್ರೈವಿಂಗ್ ಕಲಿಯುತ್ತಿದ್ದ ವೇಳೆ ಕಾರು ಚಾನೆಲ್‌ಗೆ ಪತನ; ಯುವತಿಗಾಗಿ ರಾತ್ರಿ ಪೂರ್ತಿ ಶೋಧ-Car falls into canal while learning to drive; all-night search for young woman

 SUDDILIVE || SHIVAMOGGA

ಡ್ರೈವಿಂಗ್ ಕಲಿಯುತ್ತಿದ್ದ ವೇಳೆ ಕಾರು ಚಾನೆಲ್‌ಗೆ ಪತನ; ಯುವತಿಗಾಗಿ ರಾತ್ರಿ ಪೂರ್ತಿ ಶೋಧ-Car falls into canal while learning to drive; all-night search for young woman    
Car, falls

ಶಿವಮೊಗ್ಗ, ಜು. 17: ನಗರದ ಹೊರವಲಯದ ಪೇಪರ್ ಫ್ಯಾಕ್ಟರಿ ಸಮೀಪದ ಹಾಯ್ ಹೊಳೆ ರಸ್ತೆಯಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ವೇಳೆ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚಾನೆಲ್‌ಗೆ ಬಿದ್ದ ಘಟನೆ ನಡೆದಿದ್ದು, ಯುವತಿಯೋರ್ವಳು ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.

ಕಾರುದಲ್ಲಿ ಯುವಕ ಹಾಗೂ ಯುವತಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ, ಯುವತಿ ಚಾನೆಲ್‌ನ ನೀರಿನಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಲೆಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.

ಅಪಘಾತಕ್ಕೀಡಾದ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು, ಕತ್ತಲೆ ಮತ್ತು ವೇಗವಾದ ನೀರಿನ ಹರಿವಿನ ನಡುವೆಯೇ ಕಾರಿನ ನಿಖರ ಸ್ಥಳ ಪತ್ತೆಹಚ್ಚಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಯುವತಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ರಾತ್ರಿ ವೇಳೆಯಲ್ಲಿಯೂ ನಿರಂತರವಾಗಿ ಸಾಗಿತು.

Car falls into canal while learning to drive; all-night search for young woman

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close