ಪರಾರಿಯಾಗಿದ್ದ ಮೊಮ್ಮಗನ ಕಾಲಿಗೆ ಪೊಲೀಸ್ ಗುಂಡು-The police shot the absconding grandson in the leg

SUDDILIVE || SHIVAMOGGA

ಪರಾರಿಯಾಗಿದ್ದ ಮೊಮ್ಮಗನ ಕಾಲಿಗೆ ಪೊಲೀಸ್ ಗುಂಡು-The police shot the absconding grandson in the leg    


ಶಿವಮೊಗ್ಗ: ನಿನ್ನೆ ಆನಂದರಾವ್ ಬಡಾವಣೆಯಲ್ಲಿ ಅಜ್ಜಿ ಸುಶೀಲಮ್ಮರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಹಾಗೂ ಮೊಮ್ಮಗ ಕಿಶೋರ್ (26)ನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ ಆತನನ್ನು ಬಂಧಿಸಲು ತೆರಳಿದ್ದ ವೇಳೆ ದೊಡ್ಡಪೇಟೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಗುನ್ನೆ ಸಂಖ್ಯೆ 236/2026 (BNS 103(1)) ಪ್ರಕರಣದ ತನಿಖೆಯ ಭಾಗವಾಗಿ, ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ (ಪಿಐ) ಹಾಗೂ ಸಿಬ್ಬಂದಿ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾಜಪೇಯಿ ಬಡಾವಣೆಗೆ ತೆರಳಿದ್ದರು.


ಈ ವೇಳೆ ಆರೋಪಿ ಕಿಶೋರ್‌ನನ್ನು ಬಂಧಿಸಲು ಮುಂದಾದಾಗ, ಪಿಐ ಅವರು ಶರಣಾಗುವಂತೆ ಎಚ್ಚರಿಕೆ ನೀಡಿದರು. ಆದರೆ ಆರೋಪಿ ತನ್ನ ಬಳಿ ಇದ್ದ ಚಾಕುವಿನಿಂದ ಸಿಪಿಸಿ ಗಣೇಶ್ (CPC-1070) ಅವರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಾಗೂ ಸಿಬ್ಬಂದಿಯ ರಕ್ಷಣೆಗಾಗಿ ಪಿಐ ಅವರು ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರು. ಆದರೂ ಆರೋಪಿ ಶರಣಾಗದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತು ಗುಂಡನ್ನು ಆರೋಪಿಯ ಎಡಗಾಲಿಗೆ ಹಾರಿಸಿ ವಶಕ್ಕೆ ಪಡೆದರು.

ಘಟನೆಯ ತಕ್ಷಣ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿದ್ದು, ಇಲಾಖೆಯ ವಾಹನದಲ್ಲಿಯೇ ಗಾಯಗೊಂಡ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ನಡೆದಿದ್ದ ಭೀಕರ ಘಟನೆಯಲ್ಲಿ, ಗಾಂಜಾ ವಿಚಾರವಾಗಿ ಅಜ್ಜಿ ಸುಶೀಲಮ್ಮರೊಂದಿಗೆ ಉಂಟಾದ ಜಗಳದ ಬಳಿಕ ಅವರನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

ಇದು ಮೂರನೇ ಆರೋಪಿ

ಕಿಶೋರ್ ಕಾಲಿಗೆ ಗುಂಡು ಹಾರಿಸಿದ ಪ್ರಕರಣವೂ ಸೇರಿದಂತೆ ವರ್ಷದಲ್ಲಿಯೇ  ಮೂರನೇ ಆರೋಪಿಗೆ ಕಾಲಿಗೆ ಗುಂಡು ಹಾರಿಸಿದ ಪ್ರಕರಣವಾಗಿದೆ. ಕಿಶೋರ್ ನಟೋರಿಯಸ್ ಗಾಂಜಾ ಮಾರಾಟಗಾರನಾಗಿದ್ದು ಗಾಂಜಾ ಮನೆ ಹತ್ತಿರ ಮಾರಬೇಡ ಎಂದಿದ್ದಕ್ಕೆ ಅಜ್ಜಿಯನ್ನ ಸಾಯಿಸಿ ಪರಾರಿಯಾಗಿದ್ದನು. 

ಕಿಶೋರ್ ನ ಕಾಲಿಗೆ ಗುಂಡು ಹಾರಿಸಿ ಆತನನ್ನ ವಶಕ್ಕೆ ಪಡೆಯಲಾಗಿದ್ದು ವರ್ಷದಲ್ಲಿ ಇದು ಮೂರನೆ ಪ್ರಕರಣವಾಗಿದೆ. ಮೊದಲು ಡಿಚ್ಚಿ ಮುಬಾರಕ್, ಎರಡನೇ ಪ್ರಕರಣ ನರಸಿಂಹನ ಹಂತಕ ಮಧು ಕಾಲಿಗೆ ಗುಂಡು ಇದು ಮೂರನೆ ಪ್ರಕರಣ ಕಿಶೋರ್ ಆಗಿದೆ.

The police shot the absconding grandson in the leg

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close