SUDDILIVE || SHIVAMOGGA
ಭದ್ರಾ ಮತ್ತು ತುಂಗಾ ಜಲಾಶಯಗಳ ಇಂದಿನ ನೀರಿನ ಮಟ್ಟ: ಒಳಹರಿವು ಇಳಿಕೆ-Today's water level of Bhadra and Tunga reservoirs: Inflow decreased
ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಭದ್ರಾ ಹಾಗೂ ತುಂಗಾ ಜಲಾಶಯಗಳಲ್ಲಿ ನೀರಿನ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ.
ಭದ್ರಾ ಜಲಾಶಯ: ಭದ್ರಾ ಜಲಾಶಯಕ್ಕೆ ಪ್ರಸ್ತುತ 4,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 139.6 ಅಡಿ ತಲುಪಿದ್ದು, ಕಳೆದ ಅಳತೆಯಿಂದ ಸುಮಾರು 6 ಇಂಚು ಏರಿಕೆಯಾಗಿದೆ.
ತುಂಗಾ ಜಲಾಶಯ: ತುಂಗಾ ಜಲಾಶಯಕ್ಕೆ 17,465 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ. ಜಲಾಶಯದಿಂದ 15,855 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನಿನ್ನೆ ಸಂಜೆ ಜಲಾಶಯದ 22 ಗೇಟ್‌ಗಳನ್ನು ತಲಾ 25 ಸೆಂಟಿಮೀಟರ್‌ಗಳಷ್ಟು ತೆರೆದು ನೀರು ಹೊರಹರಿಸಲಾಗುತ್ತಿತ್ತು. ಇಂದು ಬೆಳಿಗ್ಗೆ ಒಳಹರಿವು ಕಡಿಮೆಯಾದ ಕಾರಣ 10 ಗೇಟುಗಳನ್ನ ಮುಚ್ಚಿ 15855 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ.
ಮಳೆ ಪ್ರಮಾಣದಲ್ಲಿ ಏರಿಳಿತ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎರಡೂ ಜಲಾಶಯಗಳ ಒಳಹರಿವು ಹಾಗೂ ನೀರಿನ ಮಟ್ಟದಲ್ಲಿ ಬದಲಾವಣೆಗಳು ಮುಂದುವರಿಯುವ ಸಾಧ್ಯತೆ ಇದೆ.
