ಶಿವಮೊಗ್ಗದಲ್ಲಿ ಯುವತಿ ನೇಣಿಗೆ ಶರಣು; ತಾಯಿ-ಮಗಳ ಜಗಳ ಹಿನ್ನೆಲೆ ಶಂಕೆ-Young woman hangs herself in Shivamogga; mother-daughter fight suspected as motive

SUDDILIVE || SHIVAMOGGA

ಶಿವಮೊಗ್ಗದಲ್ಲಿ ಯುವತಿ ನೇಣಿಗೆ ಶರಣು; ತಾಯಿ-ಮಗಳ ಜಗಳ ಹಿನ್ನೆಲೆ ಶಂಕೆ-Young woman hangs herself in Shivamogga; mother-daughter fight suspected as motive   

Young, woman

ಶಿವಮೊಗ್ಗ: ನಗರದ ಕೀರ್ತಿನಗರ 1ನೇ ಕ್ರಾಸ್‌ನಲ್ಲಿ 22 ವರ್ಷದ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಮೃತರನ್ನು ರಂಜಿತಾ (22) ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಮ್ಮ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ತಾಯಿ-ಮಗಳ ನಡುವಿನ ಜಗಳದಿಂದ ಮನನೊಂದು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಘಟನೆಯ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ.

ವಿಷಯ ತಿಳಿಯುತ್ತಿದ್ದಂತೆ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

Young woman hangs herself in Shivamogga; mother-daughter fight suspected as motive

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close