ಶಿವಮೊಗ್ಗದ ಲಿಫ್ಟ್ ದುರಂತ: ಸಿಲುಕಿ 80 ವರ್ಷದ ವೃದ್ಧ ಸಾವು- Shivamogga lift tragedy: 80-year-old dies after getting trapped

 SUDDILIVE || SHIVAMOGGA

ಶಿವಮೊಗ್ಗದ ಲಿಫ್ಟ್ ದುರಂತ: ಸಿಲುಕಿ 80 ವರ್ಷದ ವೃದ್ಧ ಸಾವು-  Shivamogga lift tragedy: 80-year-old dies after getting trapped  

Lift, tragedy

ಶಿವಮೊಗ್ಗ: ನಗರದ ಉಷ ನರ್ಸಿಂಗ್ ರಸ್ತೆಯಿಂದಬರೈಲ್ವೆ ನಿಲ್ದಾಣದ  100 ಅಡಿ ರಸ್ತೆಯಲ್ಲಿರುವ  ದತ್ತ ಮಂದಿರದ ಗರ್ಭಗುಡಿಯ ಹಿಂಭಾಗದಲ್ಲಿರುವ  ಭಾನುವಾರ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ಸುಮಾರು 80 ವರ್ಷದ ಕುಮಾರಸ್ವಾಮಿ(ನಿವೃತ್ತ ಇಂಜಿನಿಯರ್) ಎಂಬ ವೃದ್ಧರು ಸಾವನ್ನಪ್ಪಿರುವ  ಘಟನೆ ನಡೆದಿದೆ.

ಲಭ್ಯವಿರುವ ಮಾಹಿತಿಯಂತೆ, ದತ್ತ ಮಂದಿರದಲ್ಲಿ ಮ್ಯಾನುವಲ್ ಬಾಗಿಲಿನ ಲಿಫ್ಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಲಿಫ್ಟ್ ನೆಲ ಮಹಡಿಯಲ್ಲಿ ಇಲ್ಲದಿದ್ದರೂ, ಬಾಗಿಲು ತೆರೆದಿದ್ದರಿಂದ ಕುಮಾರಸ್ವಾಮಿ ಅವರು ಲಿಫ್ಟ್ ಬಂದಿದೆ ಎಂದು ಭಾವಿಸಿ ಒಳಭಾಗದಲ್ಲಿ ನಿಂತಿದ್ದರು. ಇದೇ ವೇಳೆ ಮೇಲಿನ ಮಹಡಿಯಿಂದ ಲಿಫ್ಟ್ ಕೆಳಕ್ಕೆ ಚಲಿಸಿ ಬಂದ ಪರಿಣಾಮ ಅವರು ಲಿಫ್ಟ್‌ನ ಕೆಳಭಾಗದಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳದವರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ, ಲಿಫ್ಟ್‌ನ ಕೆಳಭಾಗದಲ್ಲಿ ಸಿಲುಕಿದ್ದ ಕುಮಾರಸ್ವಾಮಿ ಅವರನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವೇಳೆ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಮ್ಯಾನುವಲ್ ಡೋರ್ ಹೊಂದಿರುವ ಹಳೆಯ ಮಾದರಿಯ ಲಿಫ್ಟ್ ಆಗಿದ್ದು, ಲಿಫ್ಟ್ ಇಲ್ಲದಿದ್ದರೂ ಹೊರಗಿನ ಬಾಗಿಲು ತೆರೆಯಲು ಸಾಧ್ಯವಾಗುವ ವ್ಯವಸ್ಥೆಯೇ ಈ ಅವಘಡಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಗಾಯಗೊಂಡಿದ್ದ ವೃದ್ಧರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿರುವುದಾಗಿ ತಿಳಿದು ಬಂದಿದೆ. ಈ‌ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು

ಪೊಲೀಸ್ ದಾಖಲೆಗಳ ಪ್ರಕಾರ, ಭಾನುವಾರ ಬೆಳಿಗ್ಗೆ ಸುಮಾರು 8.30 ರಿಂದ 9.00 ಗಂಟೆಯ ಅವಧಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಲಿಫ್ಟ್ ಬಳಸುವ ವೇಳೆ ಕುಮಾರಸ್ವಾಮಿ ಅವರು ಲಿಫ್ಟ್‌ನ ಕೆಳಭಾಗದಲ್ಲಿ ಸಿಲುಕಿಕೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಹಾಗೂ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಹೊರತೆಗೆದು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆಯ ಕುರಿತು ಮೃತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 194 ಅಡಿಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಾಗಿದೆ.

ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಲಿಫ್ಟ್‌ನಲ್ಲಿ ತಾಂತ್ರಿಕ ದೋಷವಿತ್ತೇ ಅಥವಾ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿತೇ ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ.

Shivamogga lift tragedy: 80-year-old dies after getting trapped

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close