SUDDILIVE || SHIVAMOGGA
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ- EastWest bus owner Talkin Ahmed passes away
ಶಿವಮೊಗ್ಗ: ಶಿವಮೊಗ್ಗದ ಖ್ಯಾತ ವ್ಯಕ್ತಿ ಹಾಗೂ ಈಸ್ಟ್‌ವೆಸ್ಟ್ ಬಸ್ ಮಾಲೀಕರಾಗಿದ್ದ, ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಜನಾಬ್ ತಲ್ಕೀನ್ ಅಹ್ಮದ್ ಸಾಹೇಬ್(66) ಅವರು ನಿಧನರಾಗಿದ್ದಾರೆ.
ಸಾರ್ವಜನಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ತಲ್ಕೀನ್ ಅಹ್ಮದ್ ಅವರ ನಿಧನದ ಸುದ್ದಿ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ.
ಅವರ ನಿಧನಕ್ಕೆ ಹಲವು ಗಣ್ಯರು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದು, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಅನೇಕ ದಿನಗಳಿಂದ ತಲ್ಕೀನ್ ಅಹಮದ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ನಂತರ ಒಂದು ಕಿಡ್ನಿಯನ್ನ ಹಾಕಿಸಿಕೊಂಡಿದ್ದರು.
EastWest bus owner Talkin Ahmed passes away
