ನಾಲ್ಕು ತಿಂಗಳ ಬಳಿಕ ಸಕ್ರೆಬೈಲು ಆನೆ ಬಿಡಾರ ಓಪನ್: ಪೂಜೆ ಸಲ್ಲಿಸಿ ಭರ್ಜರಿ ಚಾಲನೆ- Sakrebailu Elephant Camp Reopens After Four Months: Grand Launch Following Puja

 SUDDILIVE || SHIVAMOGGA

ನಾಲ್ಕು ತಿಂಗಳ ಬಳಿಕ ಸಕ್ರೆಬೈಲು ಆನೆ ಬಿಡಾರ ಓಪನ್: ಪೂಜೆ ಸಲ್ಲಿಸಿ ಭರ್ಜರಿ ಚಾಲನೆ-  Sakrebailu Elephant Camp Reopens After Four Months: Grand Launch Following Puja  
Sakrebailu, elephant


ಶಿವಮೊಗ್ಗ:
ಸುಮಾರು ನಾಲ್ಕು ತಿಂಗಳ ಬಳಿಕ ಶಿವಮೊಗ್ಗದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಶನಿವಾರ ಭರ್ಜರಿ ಚಾಲನೆ ದೊರೆತಿದೆ.

ಸರ್ಕಾರದ ಆದೇಶದ ಬೆನ್ನಲ್ಲೇ ಸಕ್ರೆಬೈಲು ಆನೆ ಬಿಡಾರವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದ್ದು, ಬೆಳಿಗ್ಗೆ 8.30ರ ಸುಮಾರಿಗೆ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮದ್ಯಾಹ್ನ 1 ಗಂಟೆಗೆ ಈ ವೀಕ್ಷಣೆ ಮುಕ್ತಾಯವಾಗಿದ್ದು 545 ಜನ ಮೊದಲನೇ ದಿನ ಆನೆಗಳನ್ನಬನೋಡಿ ಕಣ್ಣುತುಂಬಿಸಿಕೊಂಡರು. 

ಬಿಡಾರದ ಗೇಟ್ ಮುಂಭಾಗದಲ್ಲಿ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮುಂಚೂಣಿಯಲ್ಲಿ ಬಹದ್ದೂರ್ ಆನೆ ಇತ್ತು. ಬಹದ್ದೂರ್ ಸೇರಿದಂತೆ ಭೀಷ್ಮ, ಸಾಗರ್, ಪುನೀತ್, ಅಶ್ವತ್ಥಾಮ, ಕೇಶವ, ಚಾಮುಂಡಿ ಹಾಗೂ ಅರ್ಜುನ ಸೇರಿದಂತೆ ಆನೆಗಳಿಗೆ ಪೂಜೆ ಸಲ್ಲಿಸಿ ಬಳಿಕ ಬಾಳೆಹಣ್ಣು ತಿನ್ನಿಸಲಾಯಿತು.

ಪೂಜೆ ಮುಗಿದ ಬಳಿಕ ಆನೆಗಳನ್ನು ಸಾಲಿನಂತೆ ಬಿಡಾರದೊಳಗೆ ಕರೆದೊಯ್ಯಲಾಯಿತು. ಸಕ್ರೆಬೈಲು ಆನೆ ಬಿಡಾರದಲ್ಲಿ ಒಟ್ಟು 24 ಆನೆಗಳಿದ್ದು, ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಅನ್ವಯ ವೈದ್ಯರ ಸಲಹೆ ಹಾಗೂ ಸುರಕ್ಷತಾ ಕ್ರಮಗಳನ್ನು ಪರಿಗಣಿಸಿ ಮೊದಲ ಹಂತದಲ್ಲಿ ಆಯ್ದ 8ರಿಂದ 10 ಆನೆಗಳನ್ನು ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಆನೆಗಳ ಆರೋಗ್ಯ ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ನಿಗದಿತ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

Sakrebailu, elephant

ಸಕ್ರೆಬೈಲು ಆನೆ ಬಿಡಾರ ಪುನರಾರಂಭಗೊಂಡ ಮೊದಲ ದಿನವೇ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಹಲವು ತಿಂಗಳ ಬಳಿಕ ಸಕ್ರೆಬೈಲಿನಲ್ಲಿ ಮತ್ತೆ ಪ್ರವಾಸಿಗರ ಚಟುವಟಿಕೆಗಳು ಆರಂಭವಾಗಿದ್ದು, ಆನೆಗಳ ವೀಕ್ಷಣೆಗೆ ಆಗಮಿಸುವವರ ಸಂಖ್ಯೆಯೂ ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.

Sakrebailu Elephant Camp Reopens After Four Months: Grand Launch Following Puja

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close