SUDDILIVE || RIPPONPETE
ಶಿವಮೊಗ್ಗ–ಕುಂದಾಪುರ ಮಾರ್ಗದಲ್ಲಿ ಗಜಾನನ ಬಸ್–ಆಲ್ಟೊ ಕಾರು ಡಿಕ್ಕಿ; ಇಬ್ಬರಿಗೆ ಸಣ್ಣಪುಟ್ಟ ಗಾಯ-Gajanan's bus and Alto car collide on Shivamogga-Kundapura route; two people suffer minor injuries
ಶಿವಮೊಗ್ಗ: ಶಿವಮೊಗ್ಗದಿಂದ ಕುಂದಾಪುರದತ್ತ ತೆರಳುತ್ತಿದ್ದ ಗಜಾನನ ಬಸ್ ಹಾಗೂ ರಿಪ್ಪನ್‌ಪೇಟೆ ಕಡೆಯಿಂದ ಶಿವಮೊಗ್ಗದತ್ತ ಬರುತ್ತಿದ್ದ ಆಲ್ಟೊ ಕಾರು ನಡುವೆ ಬುಧವಾರ ಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ.
ಬೆಳಗ್ಗೆ ಸುಮಾರು 7.15ರ ವೇಳೆಗೆ ಸುಡುರ್ ಗೇಟ್ ಹಾಗೂ 9ನೇ ಮೈಲಿಕಲ್ಲಿನ ಮಧ್ಯಭಾಗದಲ್ಲಿ ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗದಿಂದ ಕುಂದಾಪುರದತ್ತ ಪ್ರಯಾಣಿಸುತ್ತಿದ್ದ ಗಜಾನನ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಆಲ್ಟೊ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ವೇಳೆ ಆಲ್ಟೊ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಡಿಕ್ಕಿಯ ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ನೆರವಿನಿಂದ ಶಿವಮೊಗ್ಗದ ಮೆಗ್ಗಾನ್ ಗೆ ರೆಫರ್ ಮಾಡಲಾಗಿದೆ. ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ಕಾರಿನಲ್ಲಿದ್ದವರು ಸಾಗರ ತಾಲೂಕು ಆವಿನಹಳ್ಳಿಯ ನಿವಾಸಿಗಳು ಎಂದು ತಿಳಿದು ಬಂದಿದೆ.
ಘಟನೆ ಕುರಿತು ಸಂಬಂಧಪಟ್ಟ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಅಪಘಾತಕ್ಕೆ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಆಲ್ಟೋ ಕಾರಿನ ಬ್ಯಾನೆಟ್ ನುಜ್ಜುಗುಜ್ಜಾಗುದ್ದರೆ ಬಸ್ ನ ಮುಂಭಾಗವೂ ಹಾನಿಯಾಗಿದೆ.
