ಶಿವಮೊಗ್ಗ: ಮಹಿಳಾ ದಸರಾ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ-Shivamogga: Women's Dussehra Games kick off with celebration

 SUDDILIVE || SHIVAMOGGA

ಶಿವಮೊಗ್ಗ: ಮಹಿಳಾ ದಸರಾ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ-Shivamogga: Women's Dussehra Games kick off with celebration

Mahila, dasara

   

ಶಿವಮೊಗ್ಗದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಯಿತು.

ಕ್ರೀಡಾಕೂಟಕ್ಕೆ ಪೌರಕಾರ್ಮಿಕ ಹಿರಿಯ ಮಹಿಳೆಯರಾದ ರಾಧಾ, ಶಾಂತಮ್ಮ ಹಾಗೂ ನರಸಮ್ಮ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಸುವರ್ಣಾ ಶಂಕರ್, ಗ್ಯಾರಂಟಿ ಯೋಜನೆಗಳ ನಿರ್ದೇಶಕಿ ಅರ್ಚನಾ ನಿರಂಜನ್, ಅನುಪಮಾ, ಭಾಗ್ಯಾ, ಯಶೋದಾ, ಗೀತಾ ಹಾಗೂ ರೇಣು ಸೇರಿದಂತೆ ಮಹಿಳಾ ದಸರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಹಿಳೆಯರಿಗಾಗಿ ಸಾಕ್ಷಾತ್ ದೇವಿ ಅಲಂಕಾರ, ಮನೋರಂಜನಾ ಕ್ರೀಡೆಗಳು, ಅಂತ್ಯಾಕ್ಷರಿ, ಮೆಹೆಂದಿ ಸೇರಿದಂತೆ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ದಸರಾ ಹಬ್ಬದ ಸಂಭ್ರಮದ ಜೊತೆಗೆ ಮಹಿಳೆಯರಲ್ಲಿ ಉತ್ಸಾಹ, ಸೌಹಾರ್ದತೆ ಹಾಗೂ ಮನರಂಜನೆ ಮೂಡಿಸುವ ಉದ್ದೇಶದಿಂದ ಕ್ರೀಡಾಕೂಟ ನಡೆಯಿತು.

Shivamogga: Women's Dussehra Games kick off with celebration

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close