ಜನ್ಮತಾಳಿದ ಕೆಲವೇ ದಿನಗಳಲ್ಲಿ ನಾಲ್ಕು ಸಿಂಹದ ಮರಿಗಳು ಸಾವು-Four lion cubs die within days of birth

 SUDDILIVE || SHIVAMOGGA

ಜನ್ಮತಾಳಿದ ಕೆಲವೇ ದಿನಗಳಲ್ಲಿ ನಾಲ್ಕು ಸಿಂಹದ ಮರಿಗಳು ಸಾವು-Four lion cubs die within days of birth 
Sara, lion
ಸಿಂಹಿಣಿ ಸಾರಾ



ಶಿವಮೊಗ್ಗ:
ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ವಿಷಾದನೀಯ ಘಟನೆ ನಡೆದಿದ್ದು, ಸಿಂಹಿಣಿಯೊಂದು ಜನ್ಮ ನೀಡಿದ್ದ ನಾಲ್ಕು ನವಜಾತ ಸಿಂಹದ ಮರಿಗಳು ಕೆಲವೇ ದಿನಗಳಲ್ಲಿ ಮೃತಪಟ್ಟಿವೆ.

ಗುಜರಾತಿನಿಂದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ತರಲಾಗಿದ್ದ ‘ಸಾರಾ’ ಹೆಸರಿನ ಸಿಂಹಿಣಿ ಸೆಪ್ಟೆಂಬರ್ ಮೊದಲ ವಾರದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಸಿಂಹಿಣಿ ಮೊದಲ ಬಾರಿಗೆ ತಾಯಿಯಾಗಿದ್ದ ಹಿನ್ನೆಲೆಯಲ್ಲಿ ಮರಿಗಳ ಆಗಮನ ಸಿಂಹಧಾಮದ ಸಿಬ್ಬಂದಿ ಹಾಗೂ ಪ್ರಾಣಿಪ್ರೇಮಿಗಳಲ್ಲಿ ಸಂತಸ ಮೂಡಿಸಿತ್ತು. ಆದರೆ, ಈ ಸಂತಸ ಹೆಚ್ಚು ದಿನ ಉಳಿಯಲಿಲ್ಲ.

ತಾಯಿ ಹಾಲು ಸಿಗದೆ ನಿತ್ರಾಣಗೊಂಡಿದ್ದ ಮರಿಗಳು

ಮಾಹಿತಿಯ ಪ್ರಕಾರ, ಜನಿಸಿದ ಬಳಿಕ ಮರಿಗಳಿಗೆ ತಾಯಿ ಸಿಂಹಿಣಿಯಿಂದ ಸಮರ್ಪಕವಾಗಿ ಹಾಲು ಸಿಗಲಿಲ್ಲ. ಪರಿಣಾಮವಾಗಿ ನಾಲ್ಕೂ ಮರಿಗಳು ಕ್ರಮೇಣ ನಿತ್ರಾಣಗೊಳ್ಳತೊಡಗಿದ್ದವು ಎನ್ನಲಾಗಿದೆ.

ನವಜಾತ ಮರಿಗಳಿಗೆ ತಾಯಿಯಿಂದ ಹಾಲು ದೊರೆಯದ ಸಂದರ್ಭದಲ್ಲಿ ಅವುಗಳನ್ನು ಉಳಿಸಿಕೊಳ್ಳಲು ಪೂರಕ ಆಹಾರ ಅಥವಾ ಮಾನವ ಸಹಾಯದಿಂದ ಫೀಡಿಂಗ್ ಮಾಡುವ ಅಗತ್ಯವಿರುತ್ತದೆ. ಆದರೆ, ಅಗತ್ಯ ಸಮಯದಲ್ಲಿ ಈ ರೀತಿಯ ಪೂರಕ ಆಹಾರ ನೀಡುವ ಕ್ರಮ ಕೈಗೊಳ್ಳಲಾಗಲಿಲ್ಲ ಎನ್ನಲಾಗಿದ್ದು, ಮರಿಗಳ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ ಮೂರನೇ ವಾರದ ವೇಳೆಗೆ ನಾಲ್ಕೂ ಮರಿಗಳು ಮೃತಪಟ್ಟಿವೆ ಎನ್ನಲಾಗಿದೆ.

ಮೊದಲ ಬಾರಿಗೆ ತಾಯಿಯಾದ ‘ಸಾರಾ’

‘ಸಾರಾ’ ಸಿಂಹಿಣಿಗೆ ಇದು ಮೊದಲ ಗರ್ಭಧಾರಣೆಯಾಗಿತ್ತು. ಮೊದಲ ಬಾರಿಗೆ ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿಗಳಲ್ಲಿ ಕೆಲವೊಮ್ಮೆ ನವಜಾತ ಮರಿಗಳನ್ನು ಪೋಷಿಸುವ ಸ್ವಾಭಾವಿಕ ವರ್ತನೆ ಸಮರ್ಪಕವಾಗಿ ವ್ಯಕ್ತವಾಗದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರಾ ಮರಿಗಳಿಗೆ ಅಗತ್ಯ ಪ್ರಮಾಣದಲ್ಲಿ ಹಾಲುಣಿಸದ ಹಿನ್ನೆಲೆಯಲ್ಲಿ ಅವು ನಿತ್ರಾಣಗೊಂಡಿದ್ದು, ಸೂಕ್ತ ಪೋಷಣೆ ದೊರೆಯದಿರುವುದು ಅವುಗಳ ಸಾವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ತಿಳಿಸಲಾಗಿದೆ.

ಪ್ರಕರಣ ಹೊರಬರಲು ವಿಳಂಬ

ಮರಿಗಳ ಸಾವು ಸೆಪ್ಟೆಂಬರ್ ಮೂರನೇ ವಾರದಲ್ಲೇ ಸಂಭವಿಸಿದ್ದರೂ, ತ್ಯಾವರೆಕೊಪ್ಪ ಸಿಂಹಧಾಮ ಮೃಗಾಲಯ ವ್ಯಾಪ್ತಿಗೆ ಬರುವುದರಿಂದ ಈ ಘಟನೆ ತಕ್ಷಣ ಸಾರ್ವಜನಿಕವಾಗಿ ಬೆಳಕಿಗೆ ಬಂದಿರಲಿಲ್ಲ ಎನ್ನಲಾಗಿದೆ.

ನಾಲ್ಕೂ ನವಜಾತ ಮರಿಗಳು ಮೃತಪಟ್ಟಿರುವುದು ಇದೀಗ ಬಹಿರಂಗವಾಗಿದ್ದು, ಘಟನೆ ಪ್ರಾಣಿಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಪ್ರಾಣಿಗಳನ್ನ, ಅರಣ್ಯ ಸಂಪತ್ತನ್ನ ನೋಡಿಕೊಳ್ಳಲಾಗದ  ಇಲಾಖೆಗಳ ಕೆಲ ಅಧಿಕಾರಿಗಳು  ಲಪ್ಟಾಯಿಸುತ್ತಿರುವುದರಿಂದ ಈ ಇಲಾಖೆ ಅವಶ್ಯಕಥೆಯಿದೆಯಾ ಎಂಬ ಪ್ರಶ್ನೆಯೂ ಹುಟ್ಟಿಹಾಕಿದೆ. ಕೆಪಿಎಸ್ಸಿಯಲ್ಲಿ ಭ್ರಷ್ಠತನ ಹೆಚ್ಚಾಗಿದ್ದಕ್ಕೆ ಆಯೋಗವನ್ನೇ ಮುಚ್ಚಲು ಹೊರಟಿರುವ ಸರ್ಕಾರ ಈ ಬಗ್ಗೆ ಯಾಕೆ ಯೋಚಿಸಬಾರದು

ಹೊಸ ಅತಿಥಿಗಳ ಆಗಮನದಿಂದ ಸಿಂಹಧಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಲ್ಲಿದ್ದ ಸಿಬ್ಬಂದಿ ಹಾಗೂ ಪ್ರಾಣಿಪ್ರೇಮಿಗಳಿಗೆ ನಾಲ್ಕೂ ಮರಿಗಳ ಸಾವು ಆಘಾತವನ್ನುಂಟುಮಾಡಿದೆ.

ನವಜಾತ ಸಿಂಹದ ಮರಿಗಳ ಆರೈಕೆ, ತಾಯಿ ಸಿಂಹಿಣಿಯ ವರ್ತನೆ ಹಾಗೂ ಮರಿಗಳಿಗೆ ಅಗತ್ಯ ಪೋಷಣೆ ದೊರೆಯುವಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂತಹ ಘಟನೆಗಳು ಮೃಗಾಲಯ ನಿರ್ವಹಣೆಯಲ್ಲಿ ವಿಶೇಷ ಗಮನದ ಅಗತ್ಯವನ್ನು ಮತ್ತೊಮ್ಮೆ ತೋರಿಸಿವೆ.

Four lion cubs die within days of birth

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close