ಶಿವಮೊಗ್ಗದಲ್ಲಿ ನಡೆದ ಹಿಟ್ ಅಂಡ್ ರನ್ ಗೆ ಶಿಕ್ಷಕಿ ಬಲಿ- Horrific road accident in Shivamogga: Teacher dies after being hit by car while out for morning walk

 SUDDILIVE || SHIVAMOGGA

ಶಿವಮೊಗ್ಗದಲ್ಲಿ ನಡೆದ ಹಿಟ್ ಅಂಡ್ ರನ್ ಗೆ ಶಿಕ್ಷಕಿ ಬಲಿ- Horrific road accident in Shivamogga: Teacher dies after being hit by car while out for morning walk  
Horrific, roadaccident


ನಗರದ ಶ್ರೀರಾಮಪುರ ರಿಂಗ್ ರಸ್ತೆ ಬಳಿ ನಡೆದ ಭೀಕರ ಹಿಟ್ ಅಂಡ್ ರನ್ ಅಪಘಾತದಲ್ಲಿ 41 ವರ್ಷದ ಶಾಲಾ ಶಿಕ್ಷಕಿ ಸ್ಥಳದಲ್ಲೇ ಗಂಭೀರಗೊಂಡು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಮೃತರನ್ನು ಪ್ರೊಫೆಸರ್ ಅವೀಶ್ ಎಸ್.ಟಿ. ಅವರ ಪತ್ನಿ ಹಾಗೂ ಶಕ್ತಿದಾಮ ಲೇಔಟ್ ನಿವಾಸಿ ರೂಪಾ ಎಂದು ಗುರುತಿಸಲಾಗಿದೆ.

​ಘಟನೆಯ ವಿವರಗಳು

  • ​ದಿನಾಂಕ ಮತ್ತು ಸಮಯ: ಅಕ್ಟೋಬರ್ 11, 2026 ರಂದು ಬೆಳಿಗ್ಗೆ ಸುಮಾರು 07:00 ಗಂಟೆಗೆ.

  • ​ಸ್ಥಳ: ಶಿವಮೊಗ್ಗದಿಂದ ಸಾಗರ ರಸ್ತೆಗೆ ಹೋಗುವ ಮಾರ್ಗದ ಶ್ರೀರಾಮಪುರ ರಿಂಗ್ ರಸ್ತೆ, ಗಂಗಮ್ಮ ದೇವಿ ದೇವಸ್ಥಾನದ ಮುಂಭಾಗ, ಕಸಬಾ ಹೋಬಳಿ, ಶಿವಮೊಗ್ಗ.

  • ​ಮೃತರು: ರೂಪಾ (41), ವೃತ್ತಿಯಲ್ಲಿ ಶಿಕ್ಷಕಿ.

  • ​ಅಪಘಾತಕ್ಕೆ ಕಾರಣವಾದ ವಾಹನ: ಮಾರುತಿ ಸುಜುಕಿ ಕಂಪನಿಯ ಬಿಳಿ ಬಣ್ಣದ ಕಾರು (ನಂಬರ್: KA-50-MC-5476).

​ಅಪಘಾತ ಹೇಗೆ ಸಂಭವಿಸಿತು?

​ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ವರ್ತಮಾನ ವರದಿಯ (FIR) ಪ್ರಕಾರ, ಅಕ್ಟೋಬರ್ 11 ರಂದು ಬೆಳಿಗ್ಗೆ ಸುಮಾರು 6:15 ರ ಸುಮಾರಿಗೆ ಶ್ರೀಮತಿ ರೂಪಾ ಮತ್ತು ಅವರ ಮಗ ಪ್ರತೀಕ್ ರವರು ವಾಕಿಂಗ್‌ಗೆ ತೆರಳಿದ್ದರು. ಬೆಳಿಗ್ಗೆ 7:15 ರ ಸಮಯದಲ್ಲಿ ಮಗ ಪ್ರತೀಕ್ ತನ್ನ ತಂದೆಗೆ ಫೋನ್ ಮಾಡಿ, ರಸ್ತೆಯಲ್ಲಿ ಅಮ್ಮನಿಗೆ ಅಪಘಾತವಾಗಿದೆ ಎಂದು ತಿಳಿಸಿದ್ದಾನೆ.

​ಶಿವಮೊಗ್ಗದಿಂದ ಸಾಗರದ ಕಡೆಗೆ ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಬಂದ ಬಿಳಿ ಬಣ್ಣದ ಮಾರುತಿ ಸುಜುಕಿ ಕಾರು, ರಸ್ತೆ ಬದಿಯಲ್ಲಿ ವಾಕ್ ಮಾಡುತ್ತಿದ್ದ ರೂಪಾ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ತಲೆ, ಬೆನ್ನು ಹಾಗೂ ಭುಜಕ್ಕೆ ತೀವ್ರ ರಕ್ತಗಾಯಗಳಾಗಿದ್ದ ರೂಪಾ ಅವರನ್ನು ಸ್ಥಳೀಯರ ಸಹಾಯದಿಂದ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ಬೆಳಿಗ್ಗೆ 11:30 ಗಂಟೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು.

​ಪೊಲೀಸ್ ತನಿಖೆ ಮತ್ತು ಕಾನೂನು ಕ್ರಮ

​ಘಟನೆಗೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ: ಪತಿ ಅವಿಶ್ ಹೇಳಿಕೆ ಪ್ರಕಾರ ಕಾರು ರೂಪ ಅವರಿಗೆ ಹಿಟ್ ಅಂಡ್ ರನ್ ಮಾಡಿ ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಸ್ಥಳೀಯರು ಮೂರು ನಾಲ್ಕು ಜನ ಓಮಿನಿಯನ್ನ ಚೇಸ್ ಮಾಡಿ ಆಯನೂರಿನಿಂದ ಘಟನೆ ನಡೆದ ಸ್ಥಳಕ್ಕೆ  ಕರೆದುಕೊಂಡು ಬಂದ ನಂತರವೂ ಪರಾರಿಯಾಗಲು ಯತ್ನಿಸಿ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ ಎಂದು ಹೇಳಿದರು. 

Horrific road accident in Shivamogga: Teacher dies after being hit by car while out for morning walk  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close