SUDDILIVE || BHADRAVATHI
₹25 ಸಾವಿರ ದಂಡ: ವಿದ್ಯುತ್ ಆಟೋ ರಿಕ್ಲೋಸರ್ ಬಾಕ್ಸ್‌ನ ಬ್ಯಾಟರಿ, ಕಾಪರ್ ವೈರ್ ಕಳವು ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ-₹25,000 fine: Accused sentenced in theft of battery, copper wire from electric auto recloser box
ಭದ್ರಾವತಿ: ಗ್ರಾಮಾಂತರ ಠಾಣೆ ವ್ಯಾಪ್ತಿಯ ದೊಣಭಘಟ್ಟ ಮುಖ್ಯ ರಸ್ತೆಯ ಹೊಳೆನೇರಳಕೆರೆ ಗ್ರಾಮದಲ್ಲಿ ವಿದ್ಯುತ್ ಆಟೋ ರಿಕ್ಲೋಸರ್ ಕಂಟ್ರೋಲ್ ಬಾಕ್ಸ್‌ನಲ್ಲಿದ್ದ ನಾಲ್ಕು ಬ್ಯಾಟರಿ ಹಾಗೂ ಕಾಪರ್ ವೈರ್‌ಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
2019ರ ಜೂನ್ 24ರಂದು ರಾತ್ರಿ ಹೊಳೆನೇರಳಕೆರೆ ಗ್ರಾಮದಲ್ಲಿ ಆಟೋ ರಿಕ್ಲೋಸರ್ ಕಂಟ್ರೋಲ್ ಬಾಕ್ಸ್‌ನೊಳಗೆ ಅಳವಡಿಸಿದ್ದ ನಾಲ್ಕು ಬ್ಯಾಟರಿ ಹಾಗೂ ಕಾಪರ್ ವೈರ್‌ಗಳನ್ನು ಮಂಜುನಾಥ್ (40) ಎಂಬಾತ ಕಳವು ಮಾಡಿಕೊಂಡು ಹೋಗಿದ್ದನು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.153/2019ರ ಅಡಿಯಲ್ಲಿ ಐಪಿಸಿ ಕಲಂ 379 ಹಾಗೂ ವಿದ್ಯುತ್ ಕಾಯ್ದೆಯ ಕಲಂ 136ರ ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಅಂದಿನ ತನಿಖಾಧಿಕಾರಿ ಕೆ.ಎಂ. ಯೋಗೇಶ್, ಪಿಐ ಅವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಸಲಾಗಿದ್ದು, ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ವಾದ-ವಿಚಾರಣೆ ಪೂರ್ಣಗೊಂಡ ಬಳಿಕ ಮಾನ್ಯ ನ್ಯಾಯಾಧೀಶರಾದ ಎನ್. ಮುನಿರಾಜ ಅವರು ಆರೋಪಿಗೆ ₹25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಸಾದಾ ಕಾರಾಗೃಹವಾಸ ಅನುಭವಿಸುವಂತೆ ಶಿಕ್ಷೆ ವಿಧಿಸಲಾಗಿದೆ.
₹25,000 fine: Accused sentenced in theft of battery, copper wire from electric auto recloser box
