SUDDILIVE || BHADRAVATHI
ಮಂಗೋಟೆ ರುದ್ರೇಶ್ ಅವರ ಬ್ಯಾನರ್ ಕಿತ್ತು ತಮ್ಮ ಬ್ಯಾನರ್ ಹಾಕಿಸಿಕೊಂಡಿದ್ರಾ ಭದ್ರಾವತಿ ಶಾಸಕರು? ಏನದು ಬ್ಯಾನರ್ ಪ್ರಕರಣ?Did Bhadravati MLAs tear down Mangote Rudresh's banner and put up their own banner? What is the banner case?
ಭದ್ರಾವತಿ: ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಅಳವಡಿಸಿದ್ದ ಪ್ಲೆಕ್ಸ್‌ಗಳನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಶಾಸಕ ಬಿ.ಕೆ. ಸಂಗಮೇಶ್ ಅವರ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿ ಭದ್ರಾವತಿ ನಿವಾಸಿ ಮಂಗೋಟೆ ರುದ್ರೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 20ರಂದು ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಹಳಿ ಕೆಳಭಾಗದ ಅಂಡರ್‌ಬ್ರಿಡ್ಜ್ ಬಳಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಶುಭಾಶಯ ಕೋರಿ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಬಳಿಕ ಅವುಗಳನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಶಾಸಕ ಬಿ.ಕೆ. ಸಂಗಮೇಶ್ ಅವರ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತೆರವುಗೊಳಿಸಲಾದ ಪ್ಲೆಕ್ಸ್‌ಗಳನ್ನು ರೈಲ್ವೆ ಹಳಿಯ ಪಕ್ಕದಲ್ಲೇ ಹರಿದು ಬಿಸಾಡಲಾಗಿದೆ. ಈ ಕುರಿತು ಶಾಸಕ ಬಿ.ಕೆ. ಸಂಗಮೇಶ್ ಅವರ ಪ್ಲೆಕ್ಸ್‌ಗಳನ್ನು ಅಳವಡಿಸಿದ್ದ ಜೈ ಭೀಮ್ ನಗರದ ದಯಾ ಎಂಬುವವರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಲಾಖೆಗೆ ಸಂಬಂಧಪಟ್ಟ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ, ಪ್ಲೆಕ್ಸ್‌ಗಳನ್ನು ತೆರವುಗೊಳಿಸಿ ಹರಿದು ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರುದ್ರೇಶ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸೆಪ್ಟೆಂಬರ್ 30ರಂದು ರಾತ್ರಿ 8.30ಕ್ಕೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣವನ್ನು ಬಿಎನ್‌ಎಸ್ ಕಾಯ್ದೆಯ ಕಲಂ 324(2), 324(3) ಅಡಿ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಆರೋಪಿಯನ್ನು ಸದ್ಯಕ್ಕೆ ಅಪರಿಚಿತ ವ್ಯಕ್ತಿ ಎಂದು ದಾಖಲಿಸಲಾಗಿದೆ.
ಈ ಪ್ರಕರಣ ಮೊದಲಿಗೆ ನ್ಯೂಟೌನ್ ಠಾಣೆಯಲ್ಲಿ ಎನ್ ಸಿ ಎಂದು ದಾಖಲಿಸಿಕೊಳ್ಳಲಾಗಿತ್ತು. ಛಲಬಿಡದ ಮಂಗೋಟೆ ರುದ್ರೇಶ್ ನಂತರ ನ್ಯಾಯಾಲಯದ ಮೂಲಕ ಎಫ್ಐಆರ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಂಗೋಟೆ ರುದ್ರೇಶ್ ಇನ್ನೂ ಎರಡು ಬ್ಯಾನರ್ ಗಳನ್ನ ವಿವಿಧ ಠಾಣ ವ್ಯಾಪ್ತಿಯಲ್ಲಿ ಕಿತ್ತುಹಾಕಲಾಗಿದ್ದು ಅದನ್ನ ಓಲ್ಡ್ ಟೌನ್ ಮತ್ತು ಹೊಸಮನೆ ಠಾಣೆಯಲ್ಲಿ ದೂರು ದಾಖಲಿಸುತ್ತಿರುವುದಾಗಿ ಹೇಳಿದ್ದಾರೆ.
Did Bhadravati MLAs tear down Mangote Rudresh's banner and put up their own banner? What is the banner case?
