SUDDILIVE || BHADRAVATHI
ರನ್ನಿಂಗ್ ರೈಲು ಹತ್ತಲು ಹೋಗಿ ಯುವಕನಿಗೆ ಗಂಭೀರ ಗಾಯ- A young man was seriously injured while trying to board a running train
ಭದ್ರಾವತಿ: ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಯುವಕನೊಬ್ಬ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಭದ್ರಾವತಿಯ ಅರಳಿಬೆಳಚಿ ವಾರ್ಡ್‌ನ ನಿವಾಸಿ ಗೋವಿಂದಸ್ವಾಮಿ ಅವರ ಪುತ್ರ ಅಪ್ಪು (32) ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.
ತಾಳಗುಪ್ಪದಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತೆರಳುವ 16228 ಸಂಖ್ಯೆಯ ರೈಲಿಗೆ ಭಾನುವಾರ ರಾತ್ರಿ 11-30 ರ ಸಮಯದಲ್ಲಿ ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಹತ್ತಲು ಅಪ್ಪು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ರೈಲು ಚಲಿಸುತ್ತಿದ್ದ ಪರಿಣಾಮ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಅವರ ಕೈಗೆ ಗಂಭೀರ ಗಾಯವಾಗಿದ್ದು, ಕಾಲಿನ ಭಾಗದಲ್ಲೂ ಚರ್ಮ ಕಿತ್ತು ಹೋಗುವಷ್ಟು ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಲಿಸುತ್ತಿರುವ ರೈಲಿಗೆ ಹತ್ತುವುದು ಅಪಾಯಕಾರಿ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
A young man was seriously injured while trying to board a running train

