SUDDILIVE || SHIVAMOGGA
ಜ್ಞಾನದೀಪ ಶಾಲೆಯ ತಂಡಕ್ಕೆ ಕಂಚಿನ ಪದಕ- Bronze medal for the Gyandeepa School team
ಶಿವಮೊಗ್ಗ: ಸಿಬಿಎಸ್‌ಇ ರಾಷ್ಟ್ರೀಯ ಅಥ್ಲೆಟಿಕ್ಸ್ ಮೀಟ್ 2026-27ರ ಅಂಡರ್-19 ಬಾಲಕರ 4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಶಿವಮೊಗ್ಗದ ಜಾವಳ್ಳಿಯ ಅರಬಿಂದೋ ಜ್ಞಾನದೀಪ ಶಾಲೆಯ ತಂಡ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ.
ಪಂಜಾಬ್‌ನ ಪಟಿಯಾಲದಲ್ಲಿರುವ ಪಂಜಾಬಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಅಕ್ಟೋಬರ್ 15ರಿಂದ 20ರವರೆಗೆ ನಡೆದ ಸಿಬಿಎಸ್‌ಇ ರಾಷ್ಟ್ರೀಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಈ ಸ್ಪರ್ಧೆ ನಡೆಯಿತು. ಸುಶೀಲಾ ದೇವಿ ಪಬ್ಲಿಕ್ ಸ್ಕೂಲ್, ಪಟಿಯಾಲದ ಆಯೋಜನೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ತಂಡವು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.
ತಂಡದಲ್ಲಿ ಮೊಹಮ್ಮದ್ ಫೈಸಲ್, ಮಂಜುನಾಥ್, ಮೊಹಮ್ಮದ್ ಅಫಾನ್, ಧೀರಜ್ ಜಿ. ಮತ್ತು ಅಥ್ರವ್ ತಿರ್ಲುಕಾ ಸ್ಥಾನ ಪಡೆದಿದ್ದರು. ತಂಡಕ್ಕೆ ಪುರುಷೋತ್ತಮ್ ಅವರು ತರಬೇತಿ ನೀಡಿದ್ದರು.
ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ತಂಡದ ಸದಸ್ಯರಿಗೆ ಅಭಿನಂದನೆಗಳು ವ್ಯಕ್ತವಾಗಿವೆ.
Bronze medal for the Gyandeepa School team
