SUDDILIVE || SHIVAMOGGA
ತುಂಗಾ ನದಿಯಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ-Missing youth found dead in Tunga River
ಶಿವಮೊಗ್ಗ: ನಗರದ ತುಂಗನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟಪ್ಪನ ಕ್ಯಾಂಪ್ ಬಳಿ ನಿನ್ನೆ ತುಂಗಾ ನದಿಯಲ್ಲಿ ನೀರುಪಾಲಾಗಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ.
ನಿನ್ನೆ ಇಬ್ಬರು ಯುವಕರಾದ ಫೈಜಾನ್ ಮತ್ತು ಯಾಸಿನ್ ಅರಾಫತ್ (25) ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಓರ್ವ ಯುವಕ ಅರಾಫತ್ ಸುರಕ್ಷಿತವಾಗಿ ದಡ ಸೇರಿದ್ದರೆ, ಫೈಜಾನ್ ನೀರಿನಲ್ಲಿ ನಾಪತ್ತೆಯಾಗಿದ್ದ. ಬಳಿಕ ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳಿಂದ ಶೋಧ ಕಾರ್ಯ ನಡೆಸಲಾಗಿತ್ತು.
ನಿನ್ನೆ ರಾತ್ರಿ 8 ಗಂಟೆಯವರೆಗೆ ಶೋಧ ಕಾರ್ಯ ನಡೆದಿತ್ತು. ನಂತರ ಸ್ಥಗಿತವಾಗಿತ್ತು. ಆದರೆ ಫೈಜಾನ್ ಶವವಾಗಿ ಪತ್ತೆಯಾಗಿದ್ದನು. ಫೈಜಾನ್ ಕಾಣೆಯಾಗಿರುವ ಬಗ್ಗೆ ತುಂಗ ನಗರ ಠಾಣೆಯಲ್ಲಿ ಪತ್ತೆಯಾಗಿದ್ದನು ಎಂದು ದೂರು ದಾಖಲಾಗಿತ್ತು.
Missing youth found dead in Tunga River
