ಸದ್ದು ಮಾಡುತ್ತಿದೆ ಮತ್ತೊಮ್ಮೆ ಅಶೋಕ್ ನಾಯ್ಕ್ ಎಂಬ ಪೋಸ್ಟರ್-The poster of Ashok Naik is making noise again

SUDDILIVE || SHIVAMOGGA

ಸದ್ದು ಮಾಡುತ್ತಿದೆ ಮತ್ತೊಮ್ಮೆ ಅಶೋಕ್ ನಾಯ್ಕ್ ಎಂಬ ಪೋಸ್ಟರ್-The poster of Ashok Naik is making noise again   

Rural, bjp


ರಾಜ್ಯಾದ್ಯಂತ ಜೆಡಿಎಸ್-ಬಿಜೆಪಿ ಪಕ್ಷ ಬಿಹಾರ ಮಾದರಿಯಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನ ಎದುರಿಸುವಂತೆ ಸಭೆ ನಡೆಸಿ ಪರಸ್ಪರ ಎರಡೂ ಪಕ್ಷದ ನಾಯಕರು ಕೈಗಳನ್ನ ಎತ್ತಿ ಹಿಡಿದಿರುವ ವೇಳೆ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಚಿಹ್ನೆ ಬಳಸದೆ ಮತ್ತೊಮ್ಮೆ ಅಶೋಕ್ ನಾಯ್ಕ್ ಎಂಬ ಪೋಸ್ಟರ್ ಬಲು ಸದ್ದು ಮಾಡಲಾರಂಭಿಸಿದೆ.

ವಿಧಾನ ಸಭೆ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೆ ಗ್ರಾಮಾಂತರದ ಬಿಜೆಪಿಯಲ್ಲಿ ಮಾಜಿ ಶಾಸಕರೊಬ್ಬರ ಪ್ರಚಾರದ ಪೊಸ್ಟ್ ವಾರ್ ಆರಂಭವಾಗಿದೆ. ಪೊಸ್ಟ್ ವಾರ್ ವಿರುದ್ದ ಮಾಜಿ ಶಾಸಕ ಕೆ.ಜಿ ಕುಮಾರಸ್ವಾಮಿ ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಲ್ಲೇಶಪ್ಪನವರ ಬಳಿ ಆಕ್ಷೇಪಿಸಿರುವುದಾಗಿ ತಿಳಿದು ಬಂದಿದೆ. 




ಪಕ್ಷದ ಅಧಿಕೃತ ವಾಟ್ಸಪ್ ಗ್ರೂಪ್‌ಗಳಲ್ಲಿ ಬಿಜೆಪಿ ಚಿಹ್ನೆ ಬಳಸದೆ ಮುಂದಿನ 2028 ಕ್ಕೆ ಅಶೋಕ್‌ನಾಯ್ಕ್ ಮತ್ತೊಮ್ಮೆ ಎನ್ನುವ ಪೋಸ್ಟ್ಗಳು ಹರಿದಾಡುತ್ತಿವೆ. ನಮ್ಮ ಮೈತ್ರಿ ಅಬ್ಯಾರ್ಥಿ ಶಾಸಕಿ ಶಾರದ ಪರ‍್ಯಾನಾಯ್ಕ್ ಹೆಸರಿಸದೆ ವಿರುದ್ದ ಕೆಲ ಕಾರ್ಯಕರ್ತರು ಪೊಸ್ಟ್ಗಳನ್ನು ಹಾಕಿ ಮಹಿಳಾ ಶಾಸಕಿಯನ್ನು ಏಕ ವಚನದಲ್ಲಿ ಸಂಬೋದಿಸುತ್ತಿರುವುದು ಕೇಳಿಬರುತ್ತಿದ್ದು ನಮ್ಮ ಪಕ್ಷದ ಗೌರವಕ್ಕೆ ದಕ್ಕೆ ತರುತ್ತಿದ್ದು ಜೆಡಿಎಸ್‌ನ ಕೆಲ ನಾಯಕರು ಪೊಸ್ಟ್ ವಿಚಾರವನ್ನು ಜಿಲ್ಲಾ ಮುಖಂಡರ ಗಮನಕ್ಕೆ ತಂದಿದ್ದಾರೆ. 

ಪೋಸ್ಟ್ ಹಾಕುವವರ ವಿರುದ್ದ ಕ್ರಮ ಜರುಗಿಸುವಂತೆ ತಿಳಿಸಿದರು ಯಾವುದೇ ಕ್ರಮ ಜರುಗಿಸಿಲ್ಲ. ಪಕ್ಷದ ಜವಬ್ದಾರಿಯುತ ಸ್ಥಾನದಲ್ಲಿರುವವರ ವಿರುದ್ದ ದೊಡ್ಡ ಮಟ್ಟದಲ್ಲಿ ದೌರ್ಜನ್ಯದಂತಹ ಗಂಭೀರ ಆರೋಪಗಳು ಕೇಳಿ ಬಂದಾಗ ಅಂತವರನ್ನು ಕೂಡಲೆ ಪಕ್ಷದ ಜವಬ್ದಾರಿಗಳಿಂದ ದೂರವಿಡಬೇಕು ಎಂಬ ಮಾತುಗಳು ಕೇಳಿ ಬಂದಿವೆ. 




ಪಕ್ಷದ ಗ್ರೂಪ್‌ಗಳಲ್ಲಿ ಮಾಜಿ ಶಾಸಕರ ಪರವಾದ ಪೋಸ್ಟ್ಗಳನ್ನು ಹಾಕದಂತೆ ತಿಳಿಸಿದರು ಕೆಲ ಕಾರ್ಯಕರ್ತರು ಅದೇ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ತಿರ್ವ ಆಕ್ಷೇಪವನ್ನ‌ ಕೆಜಿ ಕುಮಾರ ಸ್ವಾಮಿ ವ್ಯಕ್ತಪಡಿಸಿದರುವುದು ಕೇಳಿ ಬಂದಿದೆ. ಸದ್ಯ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಡೆಯುತ್ತಿರುವುದರಿಂದ ಗ್ರಾಮಾಂತರದಲ್ಲಿ ಬಿಜೆಪಿಗೆ ಟಿಕೆಟ್ ಸಿಗುವುದೆ ಈ ವರೆಗೂ ಖಚಿತವಾಗಿಲ್ಲ. ಪಕ್ಷದ ವರಿಷ್ಠರ ತಿರ್ಮಾನದಂತೆ ನಾವು ಪಕ್ಷಕ್ಕಾಗಿ ದುಡಿಯುತ್ತಿದೇವೆ. ಮುಂದಿನ ಬಾರಿ ಬಿಜೆಪಿ ಯಿಂದ ಟಿಕೆಟ್ ನೀಡುವುದಾದರೆ ನಾನು ಪ್ರಭಲ ಆಕ್ಷಾಂಕಿ ಎಂಬುದು ಸರ್ವಕಾಲಿಕ ಸತ್ಯ.
ಮಾಜಿ ಶಾಸಕರೊಬ್ಬರ ವೈಯಕ್ತಿಕ ಹಿತಕ್ಕೆ ಬಿಜೆಪಿ ಕಾರ್ಯಕರ್ತರನ್ನು ಬಲಿಯಾಗಿಸುವುದು ಯಾವ ನ್ಯಾಯ ಎಂದು ಮಾಜಿ ಶಾಸಕ ಕೆ.ಜಿ ಕುಮಾರ್ ಸ್ವಾಮಿ ತಿರ್ವ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. 

ಅಶೋಕ್ ನಾಯ್ಕ್ಗೆ ಮುಂದಿನ 2028 ನೇ ಚುನಾವಣೆಗೆ ಪಕ್ಷದಿಂದ ಬಿ ಪಾರ್ಮ್ ನೀಡಲಾಗಿದಿಯೆ ಎಂದು ಮಂಡಲ ಅಧ್ಯಕ್ಷರನ್ನು ಅವರು ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಗ್ರಾಮಾಂತರ ಬಿಜೆಪಿಯಲ್ಲಿನ ಕಾರ್ಯಕರ್ತರನ್ನು ಹೈಜಾಕ್ ಮಾಡುವ ಪಡೆ ಸಿದ್ದವಾಗಿದ್ದು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದೆ. ಜಿಲ್ಲಾ ಘಟಕ ಎಲ್ಲವನ್ನು ವಿಕ್ಷಣೆ ಮಾಡುತ್ತಿದೆ. ಒಬ್ಬ ಮಾಜಿ ಶಾಸಕನನ್ನೆ ಒಲೈಕೆ ಮಾಡುವುದು ಪಕ್ಷ ಸಂಘಟನೆ ವಿಚಾರದಲ್ಲಿ ಅಷ್ಟೊಂದು ಸರಿ ಕಾಣುವುದಿಲ್ಲ. ಪಕ್ಷದ ವಾಟ್ಸಪ್ ಗ್ರೂಪ್‌ಗಳಲ್ಲಿ ಮಾಜಿ ಶಾಸಕ ಅಶೋಕ್ ನಾಯ್ಕ್ ಪರ ಪೊಸ್ಟ್ ಹಾಕುವುದು ಇದೇ ರೀತಿ ಮುಂದುವರೆದರೆ ಕ್ಷೇತ್ರದಲ್ಲಿ ಬಿಜೆಪಿ ಮತಗಳು ಕೈ ಪಾಲಾಗುವುದು ನಿಶ್ಚಿತ. ಗ್ರಾಮಾಂತರದಲ್ಲಿ ಬಿಜೆಪಿಗೆ ಪಕ್ಷಾಂತರದ ದೊಡ್ಡ ಆಘಾತ ಕಾದಿದೆ. ಕಾಂಗ್ರೆಸ್‌ಗೆ ಮಾಜಿ ಶಾಸಕರೊಬ್ಬರು ಹೋಗುತ್ತಿರುವ ವಿಚಾರ ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ನಮ್ಮದೇ ಕ್ಷೇತ್ರ ಎಂದು ಮುನ್ನುಗ್ಗುತ್ತಿರುವಾಗ ಇವೆಲ್ಲ ನಾಗಣ್ಣ ವಾಗಲಿದೆ ಕ್ಷೇತ್ರ ಹಂಚಿಕೆ ಆದ ನಂತರ ಇವನ್ನ ಹೇಗೆ ಮೈತ್ರಿಕೂಟದಲ್ಲಿ ನಡೆಸಿಕೊಂಡು ಹೋಗುವುದು ಎಂಬುದರ ಬಗ್ಗೆ ಚಿಂತೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ

The poster of Ashok Naik is making noise again   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close