‘ಚುನಾವಣಾ ಆಯೋಗದ ವಿರುದ್ಧ ಸಿಎಂ ಪ್ರತಿಭಟನೆ ಅಕ್ಷಮ್ಯ’-ಎಸ್. ದತ್ತಾತ್ರಿ- ‘CM’s protest against Election Commission is inexcusable’- S. Dattatri

SUDDILIVE || SHIVAMOGGA

‘‘ಚುನಾವಣಾ ಆಯೋಗದ ವಿರುದ್ಧ ಸಿಎಂ ಪ್ರತಿಭಟನೆ ಅಕ್ಷಮ್ಯ’-ಎಸ್. ದತ್ತಾತ್ರಿ- ‘CM’s protest against Election Commission is inexcusable’- S. Dattatri   

Vote, chori


ಶಿವಮೊಗ್ಗ:
ಚುನಾವಣಾ ಆಯೋಗ ಸಂವಿಧಾನಬದ್ಧ ಸಂಸ್ಥೆಯಾಗಿದ್ದು, ಅದರ ವಿರುದ್ಧ ಮುಖ್ಯಮಂತ್ರಿ ಸೇರಿದಂತೆ ಸಚಿವರು ಪ್ರತಿಭಟನೆ ನಡೆಸಿರುವುದು ಅಕ್ಷಮ್ಯ ಎಂದು ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಆರೋಪಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಸರಿಯಲ್ಲ. ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇದರಿಂದ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಇದನ್ನು ‘ಮತ ಕಳವು’ ಎಂದು ಕರೆಯುವುದು ಅಸಂಬದ್ಧ ಎಂದು ಹೇಳಿದರು.

ಇ-ಫಾರ್ಮ್‌ಗಳನ್ನು ಮತದಾರರ ಮನೆಗಳಿಗೆ ತೆರಳಿ ವಿತರಿಸಬೇಕೆಂಬ ನಿಯಮವಿದ್ದರೂ, ಕಾಂಗ್ರೆಸ್ ನಾಯಕರು ಮಸೀದಿ, ಶಾಲೆ ಹಾಗೂ ಚರ್ಚ್‌ಗಳಲ್ಲಿ ಇ-ಫಾರ್ಮ್‌ಗಳನ್ನು ಹಂಚಿದ್ದಾರೆ ಎಂದು ದೂರಿದರು. ಈ ರೀತಿಯ ಲೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನೋಟಿಸ್ ನೀಡಲು ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.

SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಮಾರು 27 ಸಾವಿರ ಆಕ್ಷೇಪಣೆಗಳು ಮಾತ್ರ ಬಂದಿವೆ. ದಲಿತರು ಹಾಗೂ ಅಲ್ಪಸಂಖ್ಯಾತ ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಆರೋಪವೂ ಸರಿಯಲ್ಲ ಎಂದು ದತ್ತಾತ್ರಿ ಹೇಳಿದರು.

ಮುಖ್ಯಮಂತ್ರಿ ಸ್ಥಾನದ ಘನತೆಗೆ ಇಂತಹ ಆರೋಪಗಳು ಶೋಭೆ ತರುವುದಿಲ್ಲ. ರಾಹುಲ್ ಗಾಂಧಿ ಮಾಡಿರುವ ‘ವೋಟ್ ಚೋರಿ’ ಆರೋಪಕ್ಕೆ ಬಲ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಫಾರ್ಮ್-7 ಹಂಚಿಕೆ ಮಾಡಿರುವುದು ಅಪರಾಧವಲ್ಲ. ಸತತ ಸೋಲಿನಿಂದ ಕಾಂಗ್ರೆಸ್ ಕಂಗಾಲಾಗಿದ್ದು, ಅದರ ನೋವನ್ನು ಚುನಾವಣಾ ಆಯೋಗದ ಮೇಲೆ ಹೊರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

CM’s protest against Election Commission is inexcusable’- S. Dattatri   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close