ಶಿವಮೊಗ್ಗದಲ್ಲಿ ಮಿದುಳು ಆರೋಗ್ಯ ಉಪಕ್ರಮದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-Applications invited for various posts under the Brain Health Initiative in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಮಿದುಳು ಆರೋಗ್ಯ ಉಪಕ್ರಮದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-Applications invited for various posts under the Brain Health Initiative in Shivamogga   
Job, health


ಶಿವಮೊಗ್ಗ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ನ್ಯೂರಾಲಜಿಸ್ಟ್ ಮತ್ತು ಜಿಲ್ಲಾ ಸಂಯೋಜಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನ್ಯೂರಾಲಜಿಸ್ಟ್ ಹುದ್ದೆ: ಒಂದು ಹುದ್ದೆ ಖಾಲಿಯಿದ್ದು, ಡಿ.ಎಂ. ಅಥವಾ ಡಿ.ಎನ್.ಬಿ. ನ್ಯೂರಾಲಜಿ ವಿದ್ಯಾರ್ಹತೆ ಹೊಂದಿದವರಿಗೆ ಮಾಸಿಕ 1.50 ಲಕ್ಷ ರೂ. ವೇತನ ನೀಡಲಾಗುತ್ತದೆ. ಎಂ.ಡಿ. ಅಥವಾ ಡಿ.ಎನ್.ಬಿ. ಜನರಲ್ ಮೆಡಿಸಿನ್ ವಿದ್ಯಾರ್ಹತೆ ಹೊಂದಿದವರಿಗೆ 1.10 ಲಕ್ಷ ರೂ. ಹಾಗೂ ಐದು ವರ್ಷಗಳ ಅನುಭವವಿರುವ ಎಂ.ಬಿ.ಬಿ.ಎಸ್. ಪದವೀಧರರಿಗೆ 60 ಸಾವಿರ ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಗರಿಷ್ಠ ವಯೋಮಿತಿ 60 ವರ್ಷಗಳು.

ಜಿಲ್ಲಾ ಸಂಯೋಜಕ ಹುದ್ದೆ: ಒಂದು ಹುದ್ದೆ ಖಾಲಿಯಿದ್ದು, ಲೈಫ್ ಸೈನ್ಸಸ್, ಪಬ್ಲಿಕ್ ಹೆಲ್ತ್, ಸಮಾಜಶಾಸ್ತ್ರ, ಗ್ರಾಮೀಣಾಭಿವೃದ್ಧಿ, ಅರ್ಥಶಾಸ್ತ್ರ, ಮಾನವ ಸಂಪನ್ಮೂಲ, ಸಮಾಜ ಕಾರ್ಯ (ಎಂಎಸ್‌ಡಬ್ಲ್ಯೂ) ಅಥವಾ ಮನೋವಿಜ್ಞಾನ ವಿಷಯಗಳಲ್ಲಿ ಪ್ರಥಮ ದರ್ಜೆಯೊಂದಿಗೆ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಮಾಸಿಕ ವೇತನ 30 ಸಾವಿರ ರೂ. ಹಾಗೂ ಗರಿಷ್ಠ ವಯೋಮಿತಿ 45 ವರ್ಷಗಳು.

ಅರ್ಜಿ ಸಲ್ಲಿಕೆ ವಿವರ: ಅಕ್ಟೋಬರ್ 14ರಿಂದ 27ರವರೆಗೆ ಸರ್ಕಾರಿ ರಜಾದಿನಗಳು, ನಾಲ್ಕನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, ಪ್ರತಿದಿನ ಮಧ್ಯಾಹ್ನ 1 ಗಂಟೆಯವರೆಗೆ ಅರ್ಜಿಗಳನ್ನು ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 28ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.

ಅಭ್ಯರ್ಥಿಗಳಿಗೆ ಕನ್ನಡವನ್ನು ಸ್ಪಷ್ಟವಾಗಿ ಓದಲು ಮತ್ತು ಬರೆಯಲು ತಿಳಿದಿರಬೇಕು. ನೇಮಕಾತಿ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ 08182-222382 ಅಥವಾ 9481691580 ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Applications invited for various posts under the Brain Health Initiative in Shivamogga  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close