ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ; ಲಾರಿ ಮಾಲೀಕನಿಗೆ ತೀವ್ರ ಗಾಯ-Shivamogga: Knife attack near KSRTC depot over trivial reason; Lorry owner seriously injured​ ​

 SUDDILIVE || SHIVAMOGGA

ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ; ಲಾರಿ ಮಾಲೀಕನಿಗೆ ತೀವ್ರ ಗಾಯ-Shivamogga: Knife attack near KSRTC depot over trivial reason; Lorry owner seriously injured​    ​

Ksrtc, depot


ಶಿವಮೊಗ್ಗ:
ನಗರದ ಮಂಜುನಾಥ ಬಡಾವಣೆಯ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಎದುರು ಶನಿವಾರ (ಅಕ್ಟೋಬರ್ 3, 2026) ಮಧ್ಯಾಹ್ನ ಸಣ್ಣ ವಿಚಾರಕ್ಕೆ ಗಲಾಟೆ ನಡೆದು, 25 ವರ್ಷದ ಲಾರಿ ಚಾಲಕ ಹಾಗೂ ಮಾಲೀಕ ಮಹಮ್ಮದ್ ಅಪ್ಪಾನ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ಇರಿಯಲಾದ ಘಟನೆ ವರದಿಯಾಗಿದೆ.

​ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಅಂದು ಬೆಳಿಗ್ಗೆ ಸುಮಾರು 10:30 ರ ಸುಮಾರಿಗೆ ಮಹಮ್ಮದ್ ಅಪ್ನಾನ್ ಮತ್ತು ಅವರ ಸಹೋದರ ಮಹಮ್ಮದ್ ರೋಶನ್ ತಮ್ಮ ಲಾರಿ ಆಫೀಸ್ ಹತ್ತಿರದ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ರೋಶನ್ ಗೆ ಪಾನ ತರಲು ಹೇಳಿದ್ದಕ್ಕೆ ರೋಷನ್ ಸ್ಕೂಟಿ ತೆಗೆಯಲು ಹೋದಾಗ, ಬುಲೆಟ್ ಬೈಕ್‌ನಲ್ಲಿ ಬಂದ ಮಹಮ್ಮದ್ ಶಾಹಿದ್ ಎಂಬಾತ ವೇಗವಾಗಿ ಬಂದು ಆತನಿಗೆ ಅಸಭ್ಯವಾಗಿ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ ಅಪ್ಪಾನ್ ಅವರಿಗೆ, ಶಾಹಿದ್ ಬೆದರಿಕೆ ಹಾಕಿ ಅಲ್ಲಿಂದ ಇಲಿಯಾಸ್ ನಗರದ ಕಡೆಗೆ ತೆರಳಿದ್ದಾನೆ.

​ನಂತರ ಬೆಳಿಗ್ಗೆ 11:00 ಗಂಟೆಗೆ ಶಾಹಿದ್ ತನ್ನ ಸಹಚರರೊಂದಿಗೆ ಚಾಕು ಹಿಡಿದುಕೊಂಡು ಬಂದು ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ. ಬಳಿಕ ಮಧ್ಯಾಹ್ನ ಸುಮಾರು 12:45 ರಿಂದ 1:00 ಗಂಟೆಯ ಅವಧಿಯಲ್ಲಿ ಶಾಹಿದ್ ಮತ್ತು ಆತನ ನಾಲ್ಕು ಜನ ಸಹಚರರು ಎರಡು ಬೈಕ್‌ಗಳಲ್ಲಿ ಬಂದು, ಅಪ್ಪಾನ್ ಅವರಿಗೆ ಹಿಡಿದುಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಾಹಿದ್ ತನ್ನಲ್ಲಿದ್ದ ಚಾಕುವಿನಿಂದ ಅಪ್ಪಾನ್ ಅವರ ಎದೆಯ ಎಡಭಾಗ ಹಾಗೂ ಕೆಳಭಾಗಕ್ಕೆ ಕೊಲೆ ಮಾಡುವ ಉದ್ದೇಶದಿಂದ ಇರಿದಿದ್ದಾನೆ. ತಡೆಯಲು ಹೋದಾಗ ಅವರ ಎಡಗೈಗೂ ಗಾಯವಾಗಿದೆ.

​ಸ್ಥಳದಲ್ಲಿದ್ದ ಮುಬಾರಕ್ ಎಂಬುವವರು ಬಿಡಿಸಲು ಬಂದಾಗ ಆರೋಪಿಗಳು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ಗಾಯಾಳು ಅಪ್ಪಾನ್ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎನ್.ಹೆಚ್ (ನಾರಾಯಣ ಹೃದಯಾಲಯ) ಆಸ್ಪತ್ರೆಗೆ ಸೇರಿಸಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಮಹಮ್ಮದ್ ಶಾಹಿದ್ ಮತ್ತು ಇತರರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109(1) (ಕೊಲೆ ಯತ್ನ), 118(1) (ಮಾರಕಾಸ್ತ್ರಗಳಿಂದ ಹಲ್ಲೆ), 351(2) (ಬೆದರಿಕೆ) ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ (FIR No. 331/2026) ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Shivamogga: Knife attack near KSRTC depot over trivial reason; Lorry owner seriously injured​    ​

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close