ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ? ಯುವಕನಿಗೆ ಗಾಯ, ಹಲವೆಡೆ ಪೊಲೀಸ್ ಬಂದೋಬಸ್ತ್-Riot over trivial reason in Shivamogga: Youth injured, police deployed in many places

SUDDILIVE || SHIVAMOGGA

ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ? ಯುವಕನಿಗೆ ಗಾಯ, ಹಲವೆಡೆ ಪೊಲೀಸ್ ಬಂದೋಬಸ್ತ್-Riot over trivial reason in Shivamogga: Youth injured, police deployed in many places 

Police, bandobast

Police, bandobast


ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು, ಓರ್ವ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗ ನಗರದ ಕೆರೆದುರ್ಗಮ್ಮನ ಕೇರಿ ಸಮೀಪ ನಡೆದಿದೆ. 

ನಿನ್ನೆ ಭಾನುವಾರ ರಾತ್ರಿ  ಸುಮಾರು 8 ಗಂಟೆಗೆ ಕೆರೆದುರ್ಗಮ್ಮನ ಕೇರಿ ಬಳಿಯ ದಿನಸಿ ಅಂಗಡಿಗೆ ಕೆಲ ಯುವಕರು ಸಿಗರೇಟು ಖರೀದಿಸಲು ಬಂದಿದ್ದರು ಎನ್ನಲಾಗಿದೆ. ಸಿಗರೇಟು ಖರೀದಿಸಿ ವಾಪಸ್ ತೆರಳುವ ಸಂದರ್ಭದಲ್ಲಿ ಅಲ್ಲೇ ಇದ್ದ ವ್ಯಕ್ತಿಯೊಬ್ಬರಿಗೆ ಮೈ ತಗುಲಿದ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಗಲಾಟೆ ತೀವ್ರಗೊಂಡಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ವಿನಯ್ (27) ಎಂಬ ಯುವಕ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ಸ್ಥಳೀಯರ ಹೇಳಿಕೆ ಪ್ರಕಾರ ಪೊಲೀಸರು ಸ್ಥಳಕ್ಕೆ ಆಗಮಿಸುವ ಮುಂಚೆ ಕಲ್ಲುತೂರಾಟ ನಡೆದಿದೆ ಎಂದು ಹೇಳಿದರೆ ಪೊಲೀಸರು ಇದನ್ನ ಅಲ್ಲಗೆಳೆದಿದ್ದಾರೆ. 

ಘಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರವಿವರ್ಮ ಬೀದಿ, ಕೆರೆದುರ್ಗಮ್ಮನ ಕೇರಿ, ನೂರಾನಿ ಮಸೀದಿ ರಸ್ತೆ ಹಾಗೂ ಟಿಎಸ್‌ಆರ್ ರಸ್ತೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ. ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣದಲ್ಲಿಟ್ಟುಕೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಗಲಾಟೆಗೆ ನಿಖರ ಕಾರಣ ಹಾಗೂ ಭಾಗಿಯಾಗಿರುವವರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ನಡೆದ ಗಲಾಟೆ ನಡೆದಿದ್ದು, ರಾತ್ರಿನೇ ಸ್ಥಳಕ್ಕೆ ಶಾಸಕ ಚೆನ್ನ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ರಾಷ್ಟ್ರಭಕ್ತರಬಳಗದ ಕೆ.ಈ.ಕಾಂತೇಶ್ ಸ್ಥಳಕ್ಕೆ ಭೇಟಿ ನೀಡಿ ಅವಲೋಕಿಸಿದ್ದಾರೆ. 

ಈ ವೇಳೆ ಪ್ರಕರಣ ದಾಖಲಿಸುವ ಸಂಬಂಧ ಕಾಂತೇಶ್ ಮತ್ತು ದೊಡ್ಡಪೇಟೆ ಪಿಐ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪ್ರಕರಣ ಸುಮೋಟ ದಾಖಲಿಸಬೇಕು, ಗಲಾಟೆ ನಡೆಸಿದವರನ್ನ ಬಂಧಿಸಬೇಕು ಎಂದು ಕಾಂತೇಶ್ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಧರಣಿ ಕೂರುವ ಬಗ್ಗೆ ಎಚ್ಚರಿಸಿದ್ದಾರೆ. 

ಆದರೆ ಈ ಕುರಿತು ಹೇಳಿಕೆ ನೀಡಿರುವ ಎಸ್ಪಿ ನಿಖಿಲ್ ಗಲಾಟೆ ನಡೆದಿರುವ ಬಗ್ಗೆ ಯಾವುದೇ ಸ್ಪಷ್ಟನೆಯಿಲ್ಲ. ಯಾರೂ ಎಫ್ಐಆರ್ ನೀಡಲು ಮುಂದಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

Riot over trivial reason in Shivamogga: Youth injured, police deployed in many places  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close