SUDDILIVE || SHIVAMOGGA
ಶಿವಮೊಗ್ಗದಲ್ಲಿ ತಾಯಿ-ಮಗ ನಾಪತ್ತೆ: ಸುಳಿವು ನೀಡಲು ಮನವಿ- Mother and son missing in Shivamogga: Appeal for clues
ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಡಾವಣೆ 1ನೇ ಕ್ರಾಸ್‌ನ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಫರೀದಾ ಖಾನಂ ಜೀಶಾನ್ (27) ಅವರು ತಮ್ಮ 4 ವರ್ಷದ ಮಗ ಉಮೇರ್‌ನನ್ನು ಕರೆದುಕೊಂಡು ಅ.5ರಂದು ಶಾಲೆಗೆಂದು ಮನೆಯಿಂದ ತೆರಳಿದ್ದು, ಈವರೆಗೆ ಮನೆಗೆ ಹಿಂದಿರುಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಣೆಯಾದ ಫರೀದಾ ಖಾನಂ ಅವರು 5.2 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಅವರ ಪುತ್ರ ಉಮೇರ್ 2.5 ಅಡಿ ಎತ್ತರ, ಕೋಲುಮುಖ ಹಾಗೂ ತೆಳುವಾದ ಮೈಕಟ್ಟು ಹೊಂದಿದ್ದು, ಮನೆಯಿಂದ ತೆರಳುವಾಗ ನೀಲಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದನು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಯಿ-ಮಗನ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸಂಪರ್ಕ: 08182-261414 / 9480803345 / 9632171696
