ಶಿವಮೊಗ್ಗದಲ್ಲಿ ಫೋಟೋಗ್ರಾಫರ್‌ಗೆ ಅಡ್ಡಗಟ್ಟಿ ಹಲ್ಲೆ, ₹27 ಸಾವಿರ ಮೌಲ್ಯದ ಎರಡು ಮೊಬೈಲ್ ದರೋಡೆ- Photographer attacked, two mobile phones worth ₹27,000 stolen in Shivamogga

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಫೋಟೋಗ್ರಾಫರ್‌ಗೆ ಅಡ್ಡಗಟ್ಟಿ ಹಲ್ಲೆ, ₹27 ಸಾವಿರ ಮೌಲ್ಯದ ಎರಡು ಮೊಬೈಲ್ ದರೋಡೆ-  Photographer attacked, two mobile phones worth ₹27,000 stolen in Shivamogga 
Photographer, mobile


ಶಿವಮೊಗ್ಗ:
ನಗರದ ರಿಂಗ್ ರಸ್ತೆಯಲ್ಲಿ ಫೋಟೋಗ್ರಾಫರ್ ಒಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ₹27 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಶಿವಮೊಗ್ಗದ ಗಾಡಿಕೊಪ್ಪ ಸರ್ಕಲ್‌ನಲ್ಲಿರುವ ಶಿವು ಸ್ಟುಡಿಯೋದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ 25 ವರ್ಷದ ಯಶವಂತ್ ದರೋಡೆಗೆ ಒಳಗಾದವರು.

ಅಕ್ಟೋಬರ್ 20ರಂದು ರಾತ್ರಿ ಸುಮಾರು 8.30ರ ವೇಳೆಗೆ ಯಶವಂತ್ ಅವರು ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದರು. ಈ ವೇಳೆ ಕಸಬಾ ಭಾಗದ ಪೊದಾರ್ ಶಾಲೆಯ ಸಮೀಪದ ರಿಂಗ್ ರಸ್ತೆಯಲ್ಲಿ ಎರಡು ಬೈಕ್‌ಗಳಲ್ಲಿ ಬಂದಿದ್ದ ಮೂವರು ಅಥವಾ ನಾಲ್ವರು ಅಪರಿಚಿತರು ಅವರನ್ನು ಅಡ್ಡಗಟ್ಟಿದ್ದಾರೆ.

ಆರೋಪಿಗಳ ಪೈಕಿ ಒಬ್ಬಾತ ಯಶವಂತ್ ಅವರ ಕೈಯಲ್ಲಿದ್ದ ಸುಮಾರು ₹15 ಸಾವಿರ ಮೌಲ್ಯದ ಒಪ್ಪೋ ಮೊಬೈಲ್ ಫೋನ್‌ ಕಸಿದುಕೊಂಡಿದ್ದಾನೆ. ಬಳಿಕ ಹಣ ನೀಡುವಂತೆ ಕೇಳಿದ್ದು, ತಮ್ಮ ಬಳಿ ಹಣವಿಲ್ಲ ಎಂದು ಹೇಳಿದಾಗ ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಪ್ಯಾಂಟ್ ಜೇಬಿನಲ್ಲಿದ್ದ ಸುಮಾರು ₹12 ಸಾವಿರ ಮೌಲ್ಯದ ಐಫೋನ್ 6ಎಸ್ ಮೊಬೈಲ್‌ನ್ನೂ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯಲ್ಲಿ ಯಶವಂತ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕಳುವಾದ ಎರಡು ಮೊಬೈಲ್‌ಗಳ ಒಟ್ಟು ಅಂದಾಜು ಮೌಲ್ಯ ₹27 ಸಾವಿರ ಎಂದು ತಿಳಿಸಲಾಗಿದೆ.

ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 20ರಂದು ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 309(6)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

Photographer attacked, two mobile phones worth ₹27,000 stolen in Shivamogga 

.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close