SHIVAMOGGA || SHIVAMOGGA
ಶಿವಮೊಗ್ಗ: ವಿವಾಹಿತ ಮಹಿಳೆಗೆ ಕಿರುಕುಳ ನೀಡಿ, ತುಂಗಾ ಕಾಲುವೆಗೆ ತಳ್ಳಿ ಕೊಲೆಗೆ ಯತ್ನಿಸಿದ ಆರೋಪ – ದೂರು ದಾಖಲು
ಶಿವಮೊಗ್ಗ ನಗರದಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಮದುವೆಯಾಗುವಂತೆ ಒತ್ತಾಯಿಸಿ, ಕಿರುಕುಳ ನೀಡಿ ಹಾಗೂ ಕೊಲೆ ಮಾಡಲು ಯತ್ನಿಸಿದ ಗಂಭೀರ ಘಟನೆ ವರದಿಯಾಗಿದೆ. ಸಂತ್ರಸ್ತ ಮಹಿಳೆಗೆ ಕೆಲ ಕಾಲದಿಂದ ಪರಿಚಯವಿದ್ದ ವ್ಯಕ್ತಿಯೊಬ್ಬ, ಪತಿಯನ್ನು ಬಿಟ್ಟು ತನ್ನನ್ನು ವಿವಾಹವಾಗುವಂತೆ ಪದೇ ಪದೇ ಹಿಂಸೆ ನೀಡುತ್ತಿದ್ದನು.
ಕಳೆದ ಅಕ್ಟೋಬರ್ 4ರಂದು ಸಂತ್ರತೆಯ ಪತಿಯ ಬಳಿ ತೆರಳಿದ ಆರೋಪಿ ಹಾಗೂ ಆತನ ಕುಟುಂಬದವರು, ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿ ಕೊಲೆ ಬೆದರಿಕೆ ಹಾಕಿದ್ದರು. ಬಳಿಕ ಅಕ್ಟೋಬರ್ 17ರಂದು ಸಂತ್ರತ ಮಹಿಳೆಯನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದು, ಗೋಪಾಳ ಹಾಗೂ ಆಲೋಳ ಸುತ್ತಮುತ್ತ ತಿರುಗಿಸಿ, ಮದುವೆಯಾಗಲು ನಿರಾಕರಿಸಿದ ವಿವಾಹಿತ ಮಹಿಳೆಯನ್ನ ಹಲ್ಲೆ ನಡೆಸಿ ತುಂಗಾ ಕಾಲುವೆಯ ದಂಡೆಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಮಹಿಳೆಯ ಮೊಬೈಲ್ ಫೋನ್ ಅನ್ನು ಧ್ವಂಸಗೊಳಿಸಿ, ವಿಷದ ಬಾಟಲಿ ನೀಡಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಘಟನೆ ಸಂಬಂಧ ಸಂತ್ರತ ಮಹಿಳೆ ಕುಟುಂಬದವರೊಂದಿಗೆ ಚರ್ಚಿಸಿ ತಡವಾಗಿ ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪೊಲೀಸರು ವಿವಿಧ ಆಯಾಮದ ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
