SUDDILIVE || SHIVAMOGGA
ಭದ್ರಾ ನಾಲೆಗಳಿಗೆ ಕನಿಷ್ಠ 20 ದಿನ ನೀರು ಹರಿಸಿ, ಮೇಲ್ದಂಡೆಗೆ ನೀರು ನಿಲ್ಲಿಸಿ: ಕೆ.ಟಿ. ಗಂಗಾಧರ್
- Release water to Bhadra canals for at least 20 days and stop water on the upper bank: K.T. Gangadhar
ಶಿವಮೊಗ್ಗ: ಭದ್ರಾ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳಿಗೆ ಕನಿಷ್ಠ 20 ದಿನ ನೀರು ಹರಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು ಎಂದು ರೈತ ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯ ಕೆ.ಟಿ. ಗಂಗಾಧರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ಎಡದಂಡೆ, ಬಲದಂಡೆ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ನವೆಂಬರ್ 16 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
sÀದ್ರಾ ಜಲಾಶಯದ ನೀರನ್ನು ಅವಲಂಬಿಸಿ ಕೃಷಿ ಕಾಯಕದಿಂದ ಬದುಕು ಕಟ್ಟಿಕೊಂಡಿದ್ದೇವೆ. ಪ್ರಸ್ತುತ ವರ್ಷದಲ್ಲಿ ಮಳೆ ಕೊರತೆಯಿಂದಾಗಿ, ಭತ್ತ, ಅಡಿಕೆ, ತೆಂಗು, ಬಾಳೆ ಮುಂತಾದ ಬೆಳೆಗಳಾಗಿ ಬೆಳೆಯುತ್ತಿದ್ದೇವೆ. ಸರ್ಕಾರವೇ ರಾಜ್ಯದ 30 ಜಿಲ್ಲೆಗಳಲ್ಲಿ 226 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಬೆಳೆಗಾಗಿ ಕಾಲದಲ್ಲಿ ಕುಡಿಯುವ ನೀರಿನ ಆದ್ಯತೆಗಾಗಿ ಮುಖ್ಯಮಂತ್ರಿಗಳ ಕೋರಿಕೆಯಂತೆ, ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಭತ್ತದ ಬೆಳೆಯನ್ನು ಬೆಳೆಯುವುದನ್ನು ನಿಲ್ಲಿಸಿ, ಬೇಸಿಗೆ ಬೆಳೆ ಬೆಳೆಯಲು ಜವಾಬ್ದಾರಿಯಿಂದ ನೀರನ್ನು ಕಾಯ್ದಿರಿಸಿದ್ದೇವೆ ಎಂದರು.
ಆದರೆ, ತುಂಗಾದಿAದ ಭದ್ರಾ ಜಲಾಶಯಕ್ಕೆ ನೀರು ಹರಿಸಿದ ನಂತರ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಮೂರು ಟಿಎಂಸಿ ನೀರು ಹರಿಸಿ, ಹರಿಸಿದ ನೀರನ್ನು ಸದ್ಬಳಕೆ ಮಾಡಿಕೊಳ್ಳದೆ, ನಾಲೆಗಳ ಕೊನೆಯ ಭಾಗದ ಕೆರೆಗಳಿಗೆ ಹೆಚ್ಚುವರಿ ಒಂದು ಟಿಎಂಸಿ ನೀರು ಹರಿಸುತ್ತಿರುವ ಸರ್ಕಾರದ ನಿರ್ಧಾರವನ್ನು ಅಚ್ಚುಕಟ್ಟುದಾರರಾದ ನಾವುಗಳು ಖಂಡಿಸುತ್ತೇವೆ. ಸರ್ಕಾರದ ಈ ಕ್ರಮವು ಮರಣ ಶಾಸನವಾಗಿ ಪರಿಣಮಿಸಿದೆ. ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಜಲಾಶಯದಲ್ಲಿ ನೀರಿನ ಲೆಕ್ಕ:
ಪ್ರಸ್ತುತ ಭದ್ರಾ ಜಲಾಶಯದಲ್ಲಿ ಒಟ್ಟು 55.84 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 13.83 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಉಳಿಯುವ ನೀರು ಸುಮಾರು 42 ಟಿಎಂಸಿ ಮಾತ್ರ. ಈ ನೀರಿನಲ್ಲಿಯೂ ಈಗಾಗಲೇ ವಿವಿಧ ಅಗತ್ಯಗಳಿಗೆ ಮೀಸಲಿಡಬೇಕಾದ ಪ್ರಮಾಣ ಹೀಗಿದೆ.
ಆದರೆ ಬೇಸಿಗೆ ಹಂಗಾಮಿನ ಭತ್ತದ ಬೆಳೆಯನ್ನು ಬೆಳೆಯಲು ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳ ವ್ಯಾಪ್ತಿಗೆ ಒಟ್ಟು 36 ಟಿಎಂಸಿ ನೀರಿನ ಅಗತ್ಯವಿದೆ. ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ 120 ದಿವಸ ನೀರು ಹರಿಸಲು 7 ಟಿಎಂಸಿ ನೀರಿನ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಮೇಲ್ದಂಡೆಗೆ ನೀರು ಹರಿಸುವುದು ಸರಿಯಲ್ಲ ಎಂದು ಗಂಗಾಧರ್ ಹೇಳಿದರು.
ದಿನಾಂಕ 30-10-2026ರಿಂದ ಭದ್ರಾ ಮೇಲ್ದಂಡೆ ಹೆಚ್.ಆರ್.ಪಿ.ಗೆ ಒಂದು ಟಿಎಂಸಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ಸರ್ಕಾರವು ತನ್ನ ನಿರ್ಧಾರವನ್ನು ಬದಲಾಯಿಸಿಲ್ಲ ಎಂದು ಆರೋಪಿಸಿದರು.
ರೈತರ ಹಕ್ಕೋತ್ತಾಯಗಳು:
ತಕ್ಷಣ ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ತುಂಗಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು. ಭದ್ರಾ ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳ ವ್ಯಾಪ್ತಿ ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ, ತೆಂಗು, ಬಾಳೆ ಹಾಗೂ ಇತರೆ ಬೆಳೆಗಳಿಗೆ ಮತ್ತು ಜಾನುವಾರುಗಳಿಗೆ, ಕೆರೆ ಕುಂಟೆಗಳಿಗೆ ನವೆಂಬರ್ ತಿಂಗಳಲ್ಲಿ 20 ದಿವಸ ನೀರು ಹರಿಸಬೇಕು. ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿಯನ್ನು ತಕ್ಷಣ ರದ್ದುಪಡಿಸಿ, ಮುಂದಿನ ದಿನಗಳಲ್ಲಿ ಅಚ್ಚುಕಟ್ಟುದಾರರ ನಾಲೆಗಳಲ್ಲಿ ನೀರು ಹರಿಸುವ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರ ಬೆಳೆ ಹಾನಿ ಅನುಭವಿಸಿದಾಗ, ಭತ್ತದ ಬೆಳೆಯ ಲಾಭದಾಯಕ ಬೆಂಬಲ ಬೆಲೆ ನೀಡಬೇಕು.
ಇದು ಕೇವಲ ನೀರಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ನಮ್ಮ ಭೂಮಿ, ನಮ್ಮ ಹಕ್ಕು, ನಮ್ಮ ಕೃಷಿ, ಉದ್ಯೋಗ ಮತ್ತು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವ ಹೋರಾಟವಾಗಿದೆ. ಬನ್ನಿ ರೈತರೇ, ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡೋಣ ಎಂದು ಗಂಗಾಧರ್ ಕರೆ ನೀಡಿದರು.
ಈ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ತಾಲೂಕು ಶಾಖೆ: ಭದ್ರಾವತಿ, ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಿರೇಶ್, ಲವಕುಮಾರ್, ಯಶವಂತರಾವ್ ಘೋರ್ಪಡೆ, ಮಂಜಪ್ಪಗೌಡ್ರು, ಮಂಜುನಾಥೇಶ್ವರ ಹೆಚ್.ಎಸ್, ಮೋಹನ್ ಕೂಡ್ಲಿಗೆರೆ, ಹಿರಣ್ಣಯ್ಯ, ಜಗದೀಶ್, ರಘುನಾಥ್ ಸೇರಿದಂತೆ ಹಲವರಿದ್ದರು.
Release water to Bhadra canals for at least 20 days and stop water on the upper bank: K.T. Gangadhar



0 ಕಾಮೆಂಟ್ಗಳು